ಶ್ರೀಮುರಳಿ ನಟನೆಯ ಮದಗಜ ಸಿನಿಮಾವನ್ನು1,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗಿದೆ.
ಈ ಚಿತ್ರ ಡಿಸೆಂಬರ್ 3 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದ್ದು, ಬಿಡುಗಡೆಗೆ ಚಿತ್ರ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಈ ಹಿಂದೆ ಮದಗಜ ಮೆಲೋಡಿ ಹಾಡಿನ ಮೂಲಕ ಗಮನ ಸೆಳೆದಿತ್ತು. ನಟಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡಿರುವ ಮೆಲೋಡಿ ಲವ್ ಟ್ರ್ಯಾಕ್ ಈಗಾಗಲೇ ಸಿನಿಪ್ರಿಯರ ಮನ ಗೆದ್ದಿದೆ. “ಗೆಳೆಯ ನನ್ನ ಗೆಳೆಯ” ಹಾಡಿನ ಬಳಿಕ ಈಗ ಮಸ್ತ್ ಮಾಸ್ ಹಾಡು ರಿಲೀಸ್ ಆಗಿದೆ. ನವೆಂಬರ್ 12 ರಂದು ಈ ಸಾಂಗ್ ರಿಲೀಸ್ ಆಗಿದ್ದು, ಈಗಾಗಲೇ ಹಾಡನ್ನು 4 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ. ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ದೊಡ್ಡ ಹಣಕ್ಕೆ ಮಾರಾಟವಾಗಿವೆ ಎಂದು ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.
ಮದಗಜ ಚಿತ್ರದಲ್ಲಿ ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ದೇವಯಾನಿ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ.
ಮೊದಲ ಬಾರಿಗೆ ಆಶಿಕಾ ಅವರು ಶ್ರೀಮುರಳಿ ಜೊತೆ ನಟಿಸುತ್ತಿದ್ದು, ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲ ಪೋಸ್ಟರ್ ನಲ್ಲಿ ಆಶಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.
ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ತೆಲುಗು ಹಾಗೂ ತಮಿಳು ಭಾಷೆಯ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಚಿತ್ರ ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿದೆ. ಚಿತ್ರ ಬಿಡುಗಡೆಗೆ ಬಹುತೇಕ ಸಿದ್ಧತೆ ಮುಗಿದಿದೆ.
______________

Be the first to comment