ಎಂ. ನರಸಿಂಹಲು

ಎಂ. ನರಸಿಂಹಲು KFCC ನೂತನ ಅಧ್ಯಕ್ಷರಾಗಿ ಆಯ್ಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಎಂ. ನರಸಿಂಹಲು ಅವರು ಆಯ್ಕೆಯಾಗಿದ್ದಾರೆ. 2024 -25ರ ಸಾಲಿನ ಚುನಾವಣೆ ಕೆ.ಎಫ್.ಸಿ.ಸಿ ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿತ್ತು. ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಈಗಾಗಲೇ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಪ್ರದರ್ಶಕ ವಲಯದಲ್ಲಿ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವಜೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜ್. ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು.ಎಂ ಅವರ ನಡುವೆ ನೇರ ಪೈಪೋಟಿ ನಡೆದಿದ್ದು ಉತ್ತಮ ಅಂತರದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಎಂ. ನರಸಿಂಹಲು

  1. ಅಧ್ಯಕ್ಷರಾಗಿ ನರಸಿಂಹಲು. ಎಂ.
  2. ನಿರ್ಮಾಪಕ ವಲಯದ ಉಪಾಧ್ಯಕ್ಷರಾಗಿ ವೆಂಕಟೇಶ್ ಕೆ.ವಿ.(ಸಫೇರ್)
  3. ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪ ಶ್ರೀನಿವಾಸ್
  4. ಪ್ರದರ್ಶಕರ ವಲಯದ ಉಪಾಧ್ಯಕ್ಷರಾಗಿ ರಂಗಪ್ಪ
  5. ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ರಾಮಕೃಷ್ಣ ಡಿ.ಕೆ.
  6. ವಿತರಕ ವಲಯದ ಗೌರವ ಕಾರ್ಯದರ್ಶಿ ಎಂ.ಎನ್. ಕುಮಾರ್
  7. ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಎಲ್. ಸಿ. ಕುಶಾಲ್
  8. ಖಜಾಂಚಿಯಾಗಿ ಮಾದೇವ್ (ಚಿಂಗಾರಿ)

ವಾಣಿಜ್ಯ ಮಂಡಳಿಯ ಒಟ್ಟು ಮತದಾರರ ಸಂಖ್ಯೆ 1409 ಇದ್ದು, ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಚುನಾವಣೆಯ ಕಣದಲ್ಲಿ ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದು, ತುಂಬಾ ಉತ್ಸುಕದಿಂದ ಎಲ್ಲರೂ ಬಂದು ಮತ ಚಲಾಯಿಸಿ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!