ನಾಗರಾಜ್ ತಲಕಾಡು ನಿರ್ದೇಶಿಸಿರುವ ‘ಲವ್‌ಸ್ಟೋರಿ 1998’ ಚಲನಚಿತ್ರ ಇದೇ 30ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಮೈಸೂರಿನ ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ನಿರ್ಮಿಸಿದೆ. ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ಮಿಥುನ್ ನಾಯಕ ನಟ. ನಾಯಕಿಯಾಗಿ ಅಭಿನಯಿಸಿರುವ ಕೃತಿಕಗೆ ಇದು ಎರಡನೇ ಸಿನಿಮಾ ಆಗಿದೆ.
ನಿರ್ದೇಶಕ ನಾಗರಾಜ್ ತಲಕಾಡು ಅವರು, ನೈಜ ಘಟನೆ ಆಧರಿಸಿದ, ಪ್ರೀತಿಯ ಕಥಾ ಹಂದರ ಇದರಲ್ಲಿದೆ. ಬಿ.ಇಡಿ ಕಾಲೇಜಿನ ಪ್ರೇಮಕಥೆ ಚಿತ್ರದ ಹೂರಣ. ಅಶ್ಲೀಲ ಸಂಭಾಷಣೆ ಇದರಲ್ಲಿಲ್ಲ. ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಚಿತ್ರವನ್ನು ಮಾಡಿದ್ದೇವೆ ಎಂದಿದ್ದಾರೆ.
ಮಂಡ್ಯ, ಮೈಸೂರು, ನಂಜನಗೂಡು ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಭಾವನೆಗಳು ಹಾಗೂ ಸಂಬಂಧಗಳಿಗೆ ಒತ್ತು ನೀಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿವೆ. ಈಗಾಗಲೇ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.
ಚಿತ್ರವನ್ನು ಬಿ.ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ.
__

Be the first to comment