ಲವ್ ಮಾಕ್ಟೇಲ್ 2′ ರಿಲೀಸ್ ಡೇಟ್ ಫಿಕ್ಸ್

‘ಲವ್ ಮಾಕ್ಟೇಲ್ 2’ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ.

‘ನೀವೆಲ್ಲರೂ ಊಹಿಸಿರುವ ಪ್ರಕಾರ ‘ಲವ್ ಮಾಕ್ಟೇಲ್ 2’ ಚಿತ್ರವು ಮುಂದಿನ ವರ್ಷ ಫೆಬ್ರವರಿ 11ರಂದು ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ” ಎಂದು ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗೆ ಚಿತ್ರದ ‘ಸಂಚಾರಿಯಾಗು ನೀ’ ಲಿರಿಕಲ್ ವಿಡಿಯೋ ಸಾಂಗ್ ಜೆಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿ ಸಂಗೀತಪ್ರಿಯರಿಂದ ಮೆಚ್ಚುಗೆ ಪಡೆದಿತ್ತು. ರಾಘವೇಂದ್ರ ಕಾಮತ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಂತೆಯೇ ಚಿತ್ರದ ‘ದೂರ ಹೋದರೂ ನನ್ನೊಳವೇ, ನೂರು ಜನ್ಮಕೂ ಕಾಯುವೆ’ ಹಾಡಿಗೆ ರಕ್ಷಿತಾ ಸುರೇಶ್ ಹಾಗೂ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.
‘ಲವ್ ಮಾಕ್ಟೇಲ್ 2’ ಚಿತ್ರ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ದುರಂತ ಅಂತ್ಯದ ‘ಲವ್ ಮಾಕ್ಟೇಲ್’ ಚಿತ್ರವನ್ನು ಪ್ರೇಕ್ಷಕರು ಒಟಿಟಿಯಲ್ಲಿ ನೋಡಿ ಮೆಚ್ಚಿದ್ದರು. ಲಾಕ್‌ಡೌನ್ ಆದ ಬಳಿಕವೂ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಲವ್‌ ಮಾಕ್ಟೇಲ್‌’ ಮೊದಲ ಭಾಗದಲ್ಲಿ ಇದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತಾರಾ ಎನ್ನುವುದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ಗೊತ್ತಾಗಲಿದೆ.
ಲವ್‌ ಮಾಕ್ಟೇಲ್‌’ ಚಿತ್ರದ ಯಶಸ್ಸಿನ ಬಳಿಕ ‘ಲವ್ ಮಾಕ್ಟೇಲ್ 2’ ಚಿತ್ರ ಮಾಡುವುದಾಗಿ ಡಾರ್ಲಿಂಗ್ ಕೃಷ್ಣ ಘೋಷಣೆ ಮಾಡಿದ್ದರು. ಅಲ್ಲದೇ ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರ ಸಿನಿಮಾಸಕ್ತರಲ್ಲಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.

https://www.instagram.com/p/CXn2CRDI-AG/?utm_medium=copy_link

Be the first to comment

Leave a Reply

Your email address will not be published. Required fields are marked *

Translate »
error: Content is protected !!