ಕುತೂಹಲ ಮೂಡಿಸಿದ ‘ರಚ್ಚು ‘ಟ್ರೈಲರ್

ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ ‘ಲವ್ ಯೂ ರಚ್ಚು’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಆಕ್ಶನ್ ಪ್ರಿನ್ಸ್‌ ಧ್ರುವ ಸರ್ಜಾ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಆದ ಒಂದು ಗಂಟೆಗೆ 45 ಸಾವಿರಕ್ಕೂ ಹೆಚ್ಚು ಜನರು ಟ್ರೈಲರ್ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೈಲರ್ ನಲ್ಲಿ ಪ್ರೀತಿಯ ಜೊತೆಗೆ ಕೊಲೆ, ಸಸ್ಪೆನ್ಸ್ ಇದ್ದು ಕುತೂಹಲ ಮೂಡಿಸಿದೆ. ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಯಾವ ರೀತಿ ಮುಟ್ಟುತ್ತದೆ ಎನ್ನುವುದಕ್ಕೆ ಚಿತ್ರ ಬಿಡುಗಡೆಯಾದ ಬಳಿಕ ಉತ್ತರ ಸಿಗಲಿದೆ.

ಜಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ “ಲವ್‌ ಯು ರಚ್ಚು’ ಚಿತ್ರಕ್ಕೆ ಶಂಕರ್‌ ಎಸ್‌. ರಾಜ್‌ ನಿರ್ದೇಶನ ಇದೆ. “ಕೃಷ್ಣನ್‌ ಲವ್‌ಸ್ಟೋರಿ’, “ಕೃಷ್ಣಲೀಲಾ’ ಸಿನಿಮಾಗಳ ಸಕ್ಸಸ್‌ ನಂತರ ನಿರ್ದೇಶಕ ಶಶಾಂಕ್‌, ನಟ ಅಜೇಯ್‌ ರಾವ್‌ ಅವರಿಗಾಗಿಯೇ ಮಾಡಿಕೊಂಡಿದ್ದ ಕಥೆ ಇದಾಗಿದ್ದು, “ಲವ್‌ ಯು ರಚ್ಚು’ ಚಿತ್ರಕ್ಕೆ ಶಶಾಂಕ್‌ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕ್ರೇಜಿ ಮೈಂಡ್ಸ್‌ ಛಾಯಾಗ್ರಹಣ ಮತ್ತು ಸಂಕಲನ ಚಿತ್ರಕ್ಕಿದೆ.

“ಈಗಾಗಲೇ ರಿಲೀಸ್‌ ಆಗಿರುವ ಫ‌ಸ್ಟ್‌ಲುಕ್‌, ಸಾಂಗ್ಸ್‌ ಎಲ್ಲದಕ್ಕೂ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗ್ತಿದೆ. ಸಿನಿಮಾದ ರೈಟ್ಸ್‌ ಗಳಿಗೂ ಎಲ್ಲ ಕಡೆಗಳಿಂದ ಒಳ್ಳೆಯ ಡಿಮ್ಯಾಂಡ್‌ ಬರುತ್ತಿದೆ. “ರಚ್ಚು’ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುತ್ತಿದೆ. ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಸಪೋರ್ಟ್‌ ಸಿಗುತ್ತಿರುವುದು ನೋಡಿದಾಗ ಖುಷಿಯಾಗುತ್ತದೆ’ ಎಂದು ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದಾರೆ.
ಲವ್‌ ಯು ರಚ್ಚು’ ಚಿತ್ರ ಡಿ.31ಕ್ಕೆ ತೆರೆಗೆ ಬರುತ್ತಿದೆ. ಈ ದಿನ ಪ್ರಜ್ವಲ್ ದೇವರಾಜ್ ನಟನೆಯ ‌ʼಅರ್ಜುನ್ ಗೌಡʼ, ಯೋಗಿ ನಟನೆಯ ʼಒಂಬತ್ತನೇ ದಿಕ್ಕುʼ, ದಿಗಂತ್  ನಟನೆಯ ʼಹುಟ್ಟುಹಬ್ಬದ ಶುಭಾಶಯಗಳುʼ ಚಿತ್ರಗಳು ತೆರೆಗೆ ಬರುತ್ತಿವೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!