ನೈಜ ಘಟನೆ ಆಧಾರಿತ ಚಿತ್ರ ‘ಲವ್ ರೆಡ್ಡಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ನಟ ದುನಿಯಾ ವಿಜಯ್ ತಂಡಕ್ಕೆ ಶುಭ ಕೋರಿದ್ದಾರೆ.
‘ಲವ್ ರೆಡ್ಡಿ ಸಿನಿಮಾ ನೋಡಿದ್ದೇನೆ. ಪ್ರತಿ ಪಾತ್ರಗಳು ಈಗಲೂ ಕಾಡುತ್ತಿವೆ. ಹೀಗಾಗಿ ತಂಡದ ಜೊತೆಗೆ ನಿಂತಿರುವೆ. ಕನ್ನಡದಲ್ಲಿ ಸಿನಿಮಾ ಪ್ರೆಸೆಂಟ್ ಮಾಡಲು ಒಪ್ಪಿಕೊಂಡೆ. ಹೊಂಬಾಳೆ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಸಿನಿಮಾ ಚೆನ್ನಾಗಿಲ್ಲ ಎಂದರೆ ನಮ್ಮ ಸಿನಿಮಾ ಚೆನ್ನಾಗಿದೆ ಎಂದು ಹಠ ಮಾಡಬಾರದು. ಸಿನಿಮಾ ಚೆನ್ನಾಗಿದ್ದಾಗ ಹಿಗ್ಗೋದು ಬೇಡ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ’ ಎಂದರು ದುನಿಯಾ ವಿಜಯ್.
ಹೊಸಬರೇ ಸೇರಿ ಮಾಡಿರುವ ಲವ್ ರೆಡ್ಡಿ’ ನ.22ರಂದು ಕನ್ನಡದಲ್ಲಿ ತೆರೆಗೆ ಬರುತ್ತಿದೆ. ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಗಡಿಭಾಗದಲ್ಲಿ ನಡೆದ ಘಟನೆಯಾಧಾರಿತ ಸಿನಿಮಾಗೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಯುವ ನಟ ಅಂಜನ್ ರಾಮಚಂದ್ರಗೆ ಶ್ರಾವಣಿ ಜೋಡಿಯಾಗಿದ್ದಾರೆ.
‘ಲವ್ ರೆಡ್ಡಿ’ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಚಿತ್ರೀಕರಣಗೊಂಡಿದ್ದು, ತೆಲುಗು ಆವೃತಿ ಈಗಾಗಲೇ ಬಿಡುಗಡೆಗೊಂಡಿದೆ. ತೆಲುಗಿನಲ್ಲಿ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕೆ ವ್ಯಕ್ತವಾಗಿದೆ.
Be the first to comment