‘ಲವ್ ಮಾಕ್ಟೆಲ್-3′ ಶೂಟಿಂಗ್ ಪೂರ್ಣ

ಡಾರ್ಲಿಂಗ್ ಕೃಷ್ಣ ಅವರ ಯಶಸ್ವಿ ಪ್ರೇಮಕಥಾ ಸರಣಿಯ ಮೂರನೇ ಭಾಗವಾದ ‘ಲವ್ ಮಾಕ್ಟೆಲ್ 3’ ಚಿತ್ರದ ಶೂಟಿಂಗ್  ಬಹುತೇಕ ಪೂರ್ಣಗೊಂಡಿದೆ.

ಫೆಬ್ರವರಿ 14, 2026 ರಂದು  ಚಿತ್ರವನ್ನು ಬಿಡುಗಡೆ ಮಾಡುವ ಗುರಿಯೊಂದಿಗೆ ಚಿತ್ರೀಕರಣ ಆರಂಭಗೊಂಡಿತ್ತು. ಅದರಂತೆ ಎಲ್ಲ ಕೆಲಸಗಳು ಅಂತಿಮ ಹಂತ ತಲುಪಿವೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈ ಭಾಗದಲ್ಲಿ  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಎರಡು ಚಿತ್ರಗಳಂತೆ ಪ್ರೇಮಕಥೆಯ ಜೊತೆಗೆ ಭಾವನಾತ್ಮಕ ಅಂಶಗಳು ಮತ್ತು ಹಾಸ್ಯವೂ ಇರಲಿವೆ. ಈ ಬಾರಿ ಚಿತ್ರಕ್ಕಾಗಿ 5 ರಿಂದ 8 ವರ್ಷದ ಪುಟ್ಟ ಹುಡುಗಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಆದರೆ ಅಂತಿಮವಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.

‘ಲವ್ ಮಾಕ್ಟೆಲ್’ ಮತ್ತು ‘ಲವ್ ಮಾಕ್ಟೆಲ್ 2’ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದರಿಂದ, ಮೂರನೇ ಭಾಗಕ್ಕೂ  ಅಪಾರ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಹಿಂದಿನ ಭಾಗಗಳ ಕಥೆ ಮುಂದುವರಿಯುವಂತೆಯೇ, ಹೊಸ ಪಾತ್ರಗಳನ್ನೂ ಪರಿಚಯಿಸಲಾಗಿದೆ.

ಡಾರ್ಲಿಂಗ್ ಕೃಷ್ಣ ಅಭಿನಯದ ‘ಬ್ರ್ಯಾಟ್’ ಸಿನಿಮಾ ಇತ್ತೀಚೆಗೆ  ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!