ಶಶಾಂಕ್ ನಿರ್ದೇಶನದ ‘ಲವ್ 360′ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.
ಹೊಸ ಪ್ರತಿಭೆಗಳಾದ ಪ್ರವೀಣ್ ಮತ್ತು ರಚನಾ ಇಂದರ್ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿರುವ ಶಿವಣ್ಣ ಚಿತ್ರತಂಡಕ್ಕೆ ಬೆಸ್ಟ್ ವಿಷ್ ಹೇಳಿದ್ದಾರೆ. ಚಿತ್ರ ಆಗಸ್ಟ್ 19ರಂದು ರಿಲೀಸ್ ಆಗಲಿದೆ.
ಸಿನಿಮಾ ಬಗ್ಗೆ ಮಾತನಾಡಿದ ಶಿವಣ್ಣ, “ಶಶಾಂಕ್ ಸ್ಟೋರಿಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡಿಕೊಂಡು, ಸ್ಟಾರ್‌ನ ಹುಟ್ಟುಹಾಕುತ್ತಾರೆ. ಅದು ಅವರ ವಿಶೇಷತೆ’ ಎಂದು ಹೇಳಿದರು.
“ಸಿನಿಮಾದ ಹೀರೋ ಪ್ರವೀಣ್ ನೋಡಿದಾಗ, ಇದು ಆತನ ಫಸ್ಟ್ ಸಿನಿಮಾ ಎಂದು ಅನ್ನಿಸಲಿಲ್ಲ. ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋಗಳ ಬರಬೇಕು. ನಾವು ಅವರಿಗೆ ಸಪೋರ್ಟ್ ಮಾಡ್ತಾನೆ ಇರಬೇಕು. ಶಶಾಂಕ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಯಾವಾಗಲೂ ಉತ್ತಮವಾಗಿರುತ್ತದೆ. ಅರ್ಜುನ್ ಜನ್ಯ ನನಗೆ ತುಂಬ ಇಷ್ಟವಾದ ಸಂಗೀತ ನಿರ್ದೇಶಕ. ಇದರಲ್ಲಿ ಸ್ಕ್ರೀನ್‌ಪ್ಲೇ ತುಂಬ ಟ್ರಿಕ್ಕಿ ಆಗಿದೆ ಎಂದು ನನಗೆ ಅನ್ನಿಸಿತು. ಪ್ರೀತಿ, ಆಕ್ಷನ್ ಎಲ್ಲವೂ ಇದೆ. ” ಎಂದು ಶಿವಣ್ಣ ಹೇಳಿದ್ದಾರೆ.
‘ಶಶಾಂಕ್ ನನಗೆ ತುಂಬ ನೆಚ್ಚಿನ ನಿರ್ದೇಶಕ. ನಾನು ಮತ್ತು ಶಶಾಂಕ್ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಹಲವು ದಿನದಿಂದ ಅಂದುಕೊಳ್ಳುತ್ತಲೇ ಇದ್ದೇವೆ. ಒಮ್ಮೆ ಅವರು ನನಗೆ ಸ್ಟೋರಿ ಕೂಡ ಹೇಳಿದ್ರು. ಆದರೆ ಅದು ಯಾಕೋ ಟೇಕಾಫ್ ಆಗಲಿಲ್ಲ.ಆದಷ್ಟು ಬೇಗ ನಾವು ಸಿನಿಮಾ ಮಾಡ್ತೀವಿ” ಎಂದು ಶಿವಣ್ಣ ಹೇಳಿದರು.
” ಶಿವಣ್ಣ ಅವರಿಂದಲೇ ಟ್ರೈಲರ್ ಲಾಂಚ್ ಮಾಡಿಸಬೇಕು ಎಂದು ಅಂದುಕೊಂಡಿದ್ದೆವು. ಅವರಿಗೆ ಶೂಟಿಂಗ್ ಇರುವುದರಿಂದ ಸಾಧ್ಯವಾಗಲಿಲ್ಲ. ನಾವೇ ಸೆಟ್‌ಗೆ ಹೋಗಿ ಶಿವಣ್ಣ ಅವರಿಂದ ಆನ್‌ಲೈನ್‌ನಲ್ಲಿ ಟ್ರೈಲರ್ ಲಾಂಚ್ ಮಾಡಿಸಿದ್ದೇವೆ. ಅವರು ಟ್ರೈಲರ್ ನೋಡಿ ತುಂಬ ಖುಷಿ ಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡ್ತಿನಿ ಅಂತ ಹೇಳಿದ್ದಾರೆ” ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.
___

Be the first to comment