ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾಕ್ಕೆ ರಿಶಬ್ ಶೆಟ್ಟಿ ಜಾಗದಲ್ಲಿ ಲೂಸ್ ಮಾದ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪರಂವಾ ನಿರ್ಮಾಣದ ಕಾಮಿಡಿ ಎಂಟರ್ ಟೈನರ್ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ದಿಗಂತ್, ಅಚ್ಯುತ್ ಕುಮಾರ್ ಜೊತೆಗೆ ರಿಷಬ್ ಶೆಟ್ಟಿ ಪ್ರಮುಖ ಪಾತ್ರ ಮಾಡಬೇಕಿತ್ತು.
ಆದರೆ ಕಾಂತಾರ ಹಿಟ್ ಆದ ಮೇಲೆ ರಿಷಬ್ ಶೆಟ್ಟಿ ಬಿಜಿ ಆಗಿದ್ದು, ಈ ಸಿನಿಮಾದಿಂದ ಹೊರ ಬಂದಿದ್ದರು.
ರಿಷಬ್ ಸ್ಥಾನಕ್ಕೆ ಕನ್ನಡದ ಪ್ರತಿಭಾವಂತ ನಟ ಲೂಸ್ ಮಾದ ಯೋಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.
__

Be the first to comment