ಡಾಲಿ ಧನಂಜಯ್ ಅಭಿನಯದ ‘ಹೆಡ್‌ಬುಷ್’ ಚಿತ್ರದಲ್ಲಿ ಲೂಸ್ ಮಾದ ಯೋಗಿ ನಟಿಸಲಿದ್ದಾರೆ.
ಹೆಡ್‌ಬುಷ್ ಸಿನಿಮಾದಲ್ಲಿ ಯೋಗಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಪಾತ್ರ, ಗೆಟಪ್ ಬಗ್ಗೆ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಆಗಿದ್ದ ಎಂಪಿ ಜಯರಾಜ್ ಅವರ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ಜಯರಾಜ್ ಆಗಿ ನಟಿಸುತ್ತಿದ್ದಾರೆ.
‘ಹೆಡ್‌ಬುಷ್’ ಸಿನಿಮಾದ ನಾಯಕಿಯಾಗಿ ತೆಲುಗಿನ ನಟಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ. ಎನ್‌ಟಿಆರ್ ಕಥಾನಾಯಕಡು, ಸಿತಾ, ಆರ್‌ಡಿಎಕ್ಸ್ ಲವ್, ವೆಂಕಿಮಾಮ, ಡಿಸ್ಕೋ ರಾಜ ಅಂತಹ ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ.
‘ಹೆಡ್‌ಬುಷ್’ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದಾರೆ. ಶೂನ್ಯ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಚಿತ್ರ ಬಿಡುಗಡೆ ಆಗಲಿದೆ.
ಲೂಸ್ ಮಾದ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರ ಸೆಪ್ಟೆಂಬರ್ 10ರಂದು ಬಿಡುಗಡೆ ಆಗಲಿದೆ.
__________





Be the first to comment