ಶಿಲ್ಪಾ ಶೆಟ್ಟಿ ದಂಪತಿಗೆ ಲುಕ್​ಔಟ್ ನೊಟೀಸ್

60 ಕೋಟಿ ರೂಪಾಯಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಲುಕ್​ಔಟ್  ನೊಟೀಸ್ ಜಾರಿ ಆಗಿದೆ.

ದೀಪಕ್ ಕೊಠಾರಿ ಹೆಸರಿನ ಉದ್ಯಮಿ  ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದಂಪತಿ 2015 ಮತ್ತು 2023ರ ನಡುವೆ 60 ಕೋಟಿ ರೂಪಾಯಿ ಹಣವನ್ನು ತಮ್ಮಿಂದ ಉದ್ಯಮ ವಿಸ್ತರಣೆಗೆ ಸಾಲವಾಗಿ ಪಡೆದಿದ್ದಾರೆ. ಆದರೆ ಆ ಹಣವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸಿಕೊಳ್ಳದೆ ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿದ್ದಾರೆ.. ಅಲ್ಲದೆ ತಾವು ಕೊಟ್ಟ ಹಣವನ್ನು ಹೂಡಿಕೆ ಎಂದು ತೋರಿಸುವ ಮೂಲಕ ತೆರಿಗೆ ವಂಚನೆಯನ್ನೂ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಾಲವಾಗಿ ಪಡೆದಿರುವ ಹಣಕ್ಕೆ ವಾರ್ಷಿಕ 12% ಬಡ್ಡಿ ಕೊಡುವುದಾಗಿ ದಂಪತಿಗಳು ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ 2016 ರಲ್ಲಿ ಶಿಲ್ಪಾ ಶೆಟ್ಟಿ ಸಾಲಕ್ಕೆ ಗ್ಯಾರೆಂಟಿಯನ್ನು  ಒದಗಿಸಿದ್ದರು. ಆದರೆ   ಬಳಿಕ ಅವರೇ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ತಾವು ಕೊಟ್ಟ ಹಣವನ್ನು ಹೂಡಿಕೆಗಳಿಗಾಗಿ ಬಳಸಿಕೊಂಡಿದ್ದಲ್ಲದೆ, ಬಡ್ಡಿ ಪಾವತಿಸದೆ ಮೋಸ ಮಾಡಿದ್ದಾರೆ ಎಂದು  ಆರೋಪ ಮಾಡಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ತಡೆ ವಿಭಾಗ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ  ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರಿಗೆ ಲುಕೌಟ್ ನೊಟೀಸ್ ನೀಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!