longdrive: ನಾಳೆ ‘ಲಾಂಗ್‌ ಡ್ರೈವ್‌’ ತೆರೆಗೆ

ಶ್ರೀರಾಜ್‌ ನಿರ್ದೇಶನದ ‘ಲಾಂಗ್‌ ಡ್ರೈವ್‌’ ಚಿತ್ರ ಫೆ.10ರಂದು ತೆರೆಗೆ ಬರಲು ಸಿದ್ಧವಾಗಿದೆ.

ಯಾವುದೇ ಪೂರ್ವ ತಯಾರಿ ಇಲ್ಲದೆ ಲಾಂಗ್‌ ಡ್ರೈವ್‌ ಹೊರಟಾಗ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದೇ ಸಿನಿಮಾದ ಕಥೆ ಆಗಿದೆ. ಚಿತ್ರದಲ್ಲಿ ಅರ್ಜುನ್‌ ಯೋಗಿ ನಾಯಕ, ಸುಪ್ರೀತಾ ಸತ್ಯನಾರಾಯಣ ಮತ್ತು ತೇಜಸ್ವಿನಿ ಶೇಖರ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ ಜತೆಗೆ ಕೆಲಸ ಮಾಡಿರುವ ಶ್ರೀರಾಜ್‌ ಇದೇ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈ ಚಿತ್ರ ನನ್ನ ತುಂಬಾ ವರ್ಷಗಳ ಕನಸು. ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳೇ ಈ ಸಿನಿಮಾ. ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಸಲಾಗಿದೆ. ಖುಷಿಯಾಗಿ ಲಾಂಗ್‌ ಡ್ರೈವ್‌ಗೆ ಹೋದವರು ಅದೇ ಖುಷಿಯಲ್ಲಿ ವಾಪಸ್ ಬರುತ್ತಾರಾ, ಇಲ್ವಾ ಎನ್ನುವುದೇ ನಮ್ಮ ಸಿನಿಮಾ” ಎಂದು ನಿರ್ದೇಶಕ ಶ್ರೀರಾಜ್‌ ಹೇಳಿದ್ದಾರೆ.

‘ಲಾಂಗ್ ಡ್ರೈವ್’ ಚಿತ್ರದ ಟೀಸರ್‌ಗೆ ಧ್ವನಿ ನೀಡಿದ್ದ ವಸಿಷ್ಠ ಸಿಂಹ, ‘ನೈಜ ಘಟನೆಯನ್ನು ಆಧರಿಸಿ ಮಾಡಿರುವ ಕಥೆಯಿದು. ಈ ತಂಡವನ್ನು ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ನಾನು ಧ್ವನಿ ನೀಡಿದ್ದೇನೆ’ ಎಂದಿದ್ದರು.

‘ಲಾಂಗ್ ಡ್ರೈವ್’ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್‌ ಗೌಡ ಸಿನಿಮಾದಲ್ಲಿ ಖಳ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ಶಬರಿ ಮಂಜು, ಬಲ ರಾಜ್ವಾಡಿ, ಮಹೇಶ್‌ ಗುರು, ಮೋಹನ್‌ ಅನ್ನಳ್ಳಿ ಮತ್ತಿತರರು ನಟಿಸಿದ್ದಾರೆ.

ಸಿನಿಮಾದ ಮೂರು ಹಾಡುಗಳಿಗೆ ವಿಕಾಸ್‌ ವಸಿಷ್ಠ ಸಂಗೀತ ನೀಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!