ಮಹೇಶ್ ಗುರು ಮೂಲತಃ ರಂಗಭೂಮಿ ಕಲಾವಿದರಾಗಿದ್ದು ಪ್ರಪ್ರಥಮವಾಗಿ ಬೆಳ್ಳಿ ಪರದೆ ಮೇಲೆ ಬಂದದ್ದು ನಮ್ಮ ಪರಮಾತ್ಮ ಡಾ ಪುನೀತ್ ರಾಜಕುಮಾರ್ ರವರ ಪ್ರೊಡಕ್ಷನ್ ನ ಮಾಯಬಜಾರ್ ನಲ್ಲಿ ನಂತರ ದಾರಿ ಯಾವುದಯ್ಯ ವೈಕುಂಟಕ್ಕೆ, ಪಾರ್ಟ್ನರ್, ಮಿಸ್ಟರಿ ಸದ್ಯಕ್ಕೆ ಶಿವ ಅನ್ನೋ ಪಾತ್ರಧಾರಿಯಾಗಿ ಲಾಂಗ್ ಡ್ರೈವ್ ಹೊರಡಲು ಸಿದ್ದರಾಗಿದ್ದಾರೆ.
ಚಿತ್ರದಲ್ಲಿ ಮಹೇಶ್ ಗುರು ಎನ್ನುವ ರಂಗಭೂಮಿ ನಟ, ಶಿವ ಎನ್ನುವ ಪಾತ್ರ ಮಾಡಿದ್ದು, ಈ ಚಿತ್ರದ ಮೂಲಕ ಅವರು ಬ್ರೇಕ್ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಇವರು ರಾಮನಗರದವರು. ರಂಗಭೂಮಿಯಲ್ಲಿ ನಾಟಕ ಮಾಡಿದ ಅನುಭವ ಹೊಂದಿದ್ದಾರೆ.
ಯುವ ನಿರ್ದೇಶಕ ಶ್ರೀರಾಜ್ ನಿರ್ದೇಶನದ ‘ಲಾಂಗ್ ಡ್ರೈವ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಯಾವುದೇ ಪೂರ್ವ ತಯಾರಿ ಇಲ್ಲದೆ ಲಾಂಗ್ ಡ್ರೈವ್ ಹೊರಟಾಗ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದೇ ಸಿನಿಮಾದ ಕಥೆ ಆಗಿದೆ. ಚಿತ್ರದಲ್ಲಿ ಅರ್ಜುನ್ ಯೋಗಿ ನಾಯಕ, ಸುಪ್ರೀತಾ ಸತ್ಯನಾರಾಯಣ ಮತ್ತು ತೇಜಸ್ವಿನಿ ಶೇಖರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ಜತೆಗೆ ಕೆಲಸ ಮಾಡಿರುವ ಶ್ರೀರಾಜ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಚಿತ್ರದ ಪೋಸ್ಟರ್ ಮತ್ತು ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಗಮನ ಸೆಳೆದಿದೆ.
‘ಲಾಂಗ್ ಡ್ರೈವ್’ ಚಿತ್ರದ ಟೀಸರ್‌ಗೆ ಧ್ವನಿ ನೀಡಿರುವ ವಸಿಷ್ಠ ಸಿಂಹ, ‘ನೈಜ ಘಟನೆಯನ್ನು ಆಧರಿಸಿ ಮಾಡಿರುವ ಕಥೆಯಿದು. ಈ ತಂಡವನ್ನು ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ನಾನು ಧ್ವನಿ ನೀಡಿದ್ದೇನೆ’ ಎಂದಿದ್ದಾರೆ.
‘ಈ ಚಿತ್ರ ನನ್ನ ತುಂಬಾ ವರ್ಷಗಳ ಕನಸು. ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳೇ ಈ ಸಿನಿಮಾ. ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಖುಷಿಯಾಗಿ ಲಾಂಗ್ ಡ್ರೈವ್‌ಗೆ ಹೋದವರು ಅದೇ ಖುಷಿಯಲ್ಲಿ ವಾಪಸ್ ಬರುತ್ತಾರಾ, ಇಲ್ವಾ ಎನ್ನುವುದೇ ನಮ್ಮ ಸಿನಿಮಾ” ಎಂದು ನಿರ್ದೇಶಕ ಶ್ರೀರಾಜ್ ಹೇಳಿದ್ದಾರೆ.’ಲಾಂಗ್ ಡ್ರೈವ್’ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಗೌಡ ಸಿನಿಮಾದಲ್ಲಿ ಖಳ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ಶಬರಿ ಮಂಜು, ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮತ್ತಿತರರು ನಟಿಸಿದ್ದಾರೆ.
ಸಿನಿಮಾದ ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ.
Be the first to comment