‘ಪ್ರೇಮ ವೈಫಲ್ಯ ಅನುಭವಿಸಿದ ನಂತರ ಮದ್ಯದ ಮೊರೆ ಹೋಗುವುದು ಸಿನಿಮಾ ಕಥೆಗಳಲ್ಲಿ ಸಾಮಾನ್ಯ. ಆದರೆ, ನಮ್ಮ ಸಿನಿಮಾದಲ್ಲಿ ಮದ್ಯಪಾನ ಆರಂಭಿಸಿದ ನಂತರ ನಾಯಕನ ಜೀವನದಲ್ಲಿ ಪ್ರೀತಿಯ ಪ್ರವೇಶ ಆಗುತ್ತದೆ…’
ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕು ಎಂದುಕೊಂಡರೆ ಬಾರ್‍ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆ ದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣ ಕಥಾನಾಯಕನ ಪಾತ್ರ ‘ನಾನೊಂಥರ’ ಚಿತ್ರದಲ್ಲಿ ಇರಲಿದೆ. ಎಲ್ಲಾ ಚಿತ್ರದಲ್ಲಿ ಪ್ರಿಯತಮೆ ಸಿಗದೆ ಇದ್ದಾಗ ದೇವದಾಸ ಆಗುತ್ತಾನೆ. ಆದರೆ ಇದರಲ್ಲಿ ಕುಡುಕ ಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗ ಇದ್ದಕ್ಕಿದ ಹಾಗೆ ಎಣ್ಣೆ ಚಟಕೆ ಬರಲುಕಾರಣವಾದರೂ ಏನು? ನೋಡುಗರಿಗೆ ಈತನು ಒಳ್ಳೆಯವನಾ? ಕೆಟ್ಟವನಾ ಅಂತಗೊಂದಲ ಹುಟ್ಟಿಸುತ್ತಾ ಕ್ಲೈಮಾಕ್ಸ್‍ನಲ್ಲಿ ಎಲ್ಲದಕ್ಕೂ ಸಮರ್ಥನೆ ಉತ್ತರವನ್ನು ನೀಡಲಾಗುತ್ತೆ ಎಂದರು ನಿರ್ದೇಶಕ ರಮೇಶ್ ಕಗ್ಗಲ್ಲು. ಈ ಚಿತ್ರದ ಮೇಕಿಂಗ್‌ನ ಕೆಲವು ದೃಶ್ಯಗಳನ್ನು ಕಳೆದ ಪತ್ರಿಕಾಗೋಷ್ಠಿಯಲ್ಲಿ ತೋರಿಸಿ, ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು.
ಸುನಿರಾಜ್ ಸಾಹಿತ್ಯದ ಆರು ಹಾಡುಗಳಿಗೆ ಸ್ಯಾಮ್ಯುಲ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿವೆ.ಛಾಯಾಗ್ರಹಣ ಸುದೀಪ್ ಫೆಬ್ರಿಕ್, ಸಂಕಲನ ಸತೀಶ್ ಚಂದ್ರಯ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮತ್ತು ದೇವದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ನಾಯಕ ತಾರಕ್ ವಿ. ಶೇಖರಪ್ಪ :
‘ನಾನೊಂಥರ ಅಂದರೆ, ನಾನು ಇತರರಿಗಿಂತ ಭಿನ್ನ ಎಂಬ ಅರ್ಥವಿದೆ. ನಾನು ನಿಭಾಯಿಸಿರುವ ಪಾತ್ರ ಕೂಡ ಈ ಮಾತಿಗೆ ಸರಿಹೊಂದುವಂತೆ ಇದೆ. ಆದರೆ ಈ ಪಾತ್ರ ಒಳ್ಳೆಯತನ ತುಂಬಿಕೊಂಡಿರುವಂಥದ್ದೋ ಅಥವಾ ಕೆಟ್ಟದ್ದೋ ಎಂಬುದು ಸಸ್ಪೆನ್ಸ್’ ಎಂದು ಹೇಳಿದರು ಚಿತ್ರದ ನಾಯಕ ತಾರಕ್ ವಿ. ಶೇಖರಪ್ಪ.
ತಾರಕ್ ಅವರಿಗೆ ಇದು ಮೂರನೆಯ ಸಿನಿಮಾ. ಈ ಚಿತ್ರದ ಕುರಿತ ಆಲೋಚನೆಗಳು ಮೊಳಕೆಯೊಡೆದಿದ್ದು ಎರಡು ವರ್ಷಗಳ ಹಿಂದೆ. ಚಿತ್ರದ ಕಥೆ ಕೇಳಿದ ನಿರ್ಮಾಪಕಿ ಜಾಕ್ಲೈನ್ ಫರ್ನಾಂಡೀಸ್ ಅವರು ಹಣ ಹೂಡಿಕೆ ಮಾಡಿದ್ದಾರೆ. ಜಾಕ್ಲೈನ್ ಅವರು ವೃತ್ತಿಯಿಂದ ವೈದ್ಯೆ. ಈ ಚಿತ್ರದ ಮೂಲಕ ಸಿನಿಮಾ ನಿರ್ಮಾಪಕಿ ಕೂಡ ಆಗಿದ್ದಾರೆ. ರಕ್ಷಿಕಾ ಅವರು ಇದರ ನಾಯಕಿ. ಅವರದ್ದು ಗಟ್ಟಿಗಿತ್ತಿಯ ಪಾತ್ರ. ಇನ್ನೂ ನಟ ದೇವರಾಜ್ ಅವರು ಇದರಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿವೆ.ಚಿತ್ರದ ಎಲ್ಲ ಕೆಲಸ ಮುಗಿದು ಬಿಡುಗಡೆಗೆ ಸಜ್ಜಾಗಿದೆ. ಲಾಕ್ ಡೌನ್ ಮುಗಿದ ನಂತರ ಚಿತ್ರದ ಬಿಡುಗಡೆ ದಿನಾಂಕ ನಿಗದಿಪಡಿಸಲಾಗುವುದು ಎಂದರು ನಿರ್ದೇಶಕರು.
Pingback: صور محمد رمضان
Pingback: Casino
Pingback: sex things for women pleasure sucking