ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಮಾಸಾಂತ್ಯಕ್ಕೆ ತೆರೆಗೆ

ಸಂಜನಾ ಸಿನಿ ಆರ್ಟ್್ಸ ಲಾಂಛನದಲ್ಲಿ ಎಸ್.ಹೆಚ್.ವಾಳ್ಕೆ ಅವರು ನಿರ್ಮಿಸಿರುವ ‘ಲೋಕಲ್  ಟ್ರೈನ್’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಈ ತಿಂಗಳ ಕೊನೆಗೆ ತೆರೆಗೆ ಬರಲಿದೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ 70 ದಿನಗಳ ಚಿತ್ರೀಕರಣ ನಡೆದಿದೆ.

ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಚಿತ್ರ ಕೂಡ ಯಶಸ್ಸು ಕಂಡಿದ್ದು, ‘ಲೋಕಲ್ ಟ್ರೈನ್ ‘ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೀನಾಕ್ಷಿ ದೀಕ್ಷಿತ್, ಎಸ್ಟರ್ ನರೋನ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿ.ಗುರುದತ್, ಮೈಸೂರು ಗೋಪಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಿರ್ಮಾಪಕ ಎಸ್.ಹೆಚ್.ವಾಳ್ಕೆ ಅವರು ಕಥೆ ಬರೆದಿದ್ದು, ರುದ್ರಮುನಿ ನಿರ್ದೇಶನ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ರಾಜುಸುಂದರಂ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಪಳನಿರಾಜ್, ಚೆನ್ನ ರಮೇಶ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಕೇಶವಾದಿತ್ಯ, ಮಾರುತಿ.ಟಿ ಸಂಭಾಷಣೆ ಬರೆದಿದ್ದಾರೆ.

 

This Article Has 1 Comment
  1. Pingback: click through the following webpage

Leave a Reply

Your email address will not be published. Required fields are marked *

Translate »
error: Content is protected !!