LOCAL TRAIN Movie Review : ತ್ರಿಕೋನ ಪ್ರೇಮದ ‘ಲೋಕಲ್ ಟ್ರೈನ್’

ಚಿತ್ರ : ‘ಲೋಕಲ್ ಟ್ರೈನ್’

ನಿರ್ದೇಶಕ : ವೈ. ಎನ್. ರುದ್ರಮುನಿ

ನಿರ್ಮಾಪಕ : ಸುಬ್ರಯಾ ಹೆಚ್. ವಲ್ಕೆ

ಪಾತ್ರವರ್ಗ: ಡಾರ್ಲಿಂಗ್ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತಾರ್ ನರೋನ, ಭಜರಂಗಿ ಲೋಕಿ, ಸಾಧು ಕೋಕಿಲ್, ಟೆನ್ನಿಸ್ ಕೃಷ್ಣ, ಸುಚೇಂದ್ರ ಪ್ರಸಾದ್ ಮುಂತಾದವರು.
ರೇಟಿಂಗ್: 3.5/5

ಟೈಟಲೇ ಹೇಳುವಂತೆ ಈ ಸಿನಿಮಾದ ಕಥೆ ಲೋಕಲ್ ಟ್ರೈನ್ ನಲ್ಲಿ ಸಾಗುತ್ತದೆ. ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವ ಜನರ ಸುತ್ತ ಸುತ್ತುವ ಕಥೆಯಲ್ಲಿ, ಮಧುರವಾದ ಪ್ರೇಮದ ಕಥಾಹಂದರ ಇದು ಚಿತ್ರದ ಜೀವಾಳ.
ಸಂತೋಷ್ ಹೆಸರಿನ ಹಳ್ಳಿ ಹುಡುಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಸಂತೋಷ್ ಹಳ್ಳಿಯಿಂದ ಬೆಂಗಳೂರಿಗೆ ಪ್ರತಿದಿನ ಲೋಕಲ್ ಟ್ರೈನ್ ನಲ್ಲಿ ಓಡಾಡುತ್ತಾನೆ. ಟ್ರೈನ್ನಲ್ಲಿ ನಾಯಕಿಯ ಸೌಂದರ್ಯಕ್ಕೆ ಮಾರು ಹೋಗಿ ಪ್ರೀತಿಯಲ್ಲಿ ಬೀಳುತ್ತಾನೆ. ಇದೇ ವೇಳೆ ಕಾಲೇಜಿನಲ್ಲಿ ಸಂತೋಷ್ ನನ್ನು ಮತ್ತೊಬ್ಬ ಹುಡುಗಿ ಪ್ರೀತಿಸಲು ಶುರು ಮಾಡುತ್ತಾಳೆ. ಒಟ್ಟಾರೆ ಇಲ್ಲಿ ತ್ರಿಕೋನ ಪ್ರೇಮ ಶುರುವಾಗುತ್ತದೆ.
ಮಗಳ ಪ್ರೀತಿಗೆ ತಾಯಿ ಒಪ್ಪದೆ ಸಮಸ್ಯೆ ಶುರು ಆಗುತ್ತದೆ. ವಿಲನ್ ಭಜರಂಗಿ ಲೋಕಿ ನಾಯಕಿಯನ್ನು ಮದುವೆ ಆಗುವಂತೆ ದುಂಬಾಲು ಬೀಳುತ್ತಾನೆ. ಸಂತೋಷನ ಪ್ರೀತಿ ಏನಾಗುತ್ತದೆ ಎನ್ನುವುದಕ್ಕೆ ಚಿತ್ರದಲ್ಲಿ ಉತ್ತರ ಇದೆ.

ಲೋಕಲ್ ಟ್ರೈನ್ ನಲ್ಲಿ ಲವ್, ಎಮೋಷನ್ ಹಾಗೂ ಆ್ಯಕ್ಷನ್ ದೃಶ್ಯಗಳು ಸೂಪರ್ ಆಗಿ ಮೂಡಿ ಬಂದಿದೆ. ಕ್ಲೈಮ್ಯಾಕ್ಸ್ ನಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಗಳಿವೆ. ಕೃಷ್ಣ ಹಾಗೂ ಮೀನಾಕ್ಷಿ ಮದುವೆ ಆಗ್ತಾರಾ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಲೋಕಲ್ ಟ್ರೈನ್ ನಲ್ಲಿ ನಾಲ್ಕು ಹಾಡು ಹಾಗೂ ಆ್ಯಕ್ಷನ್ ಸೀನ್ ಗಳು ಅದ್ಭುತವಾಗಿ ಮೂಡಿ ಬಂದಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ, ಅರ್ಜುನ್ ಜನ್ಯ ಮ್ಯೂಸಿಕ್ ಸಿನಿಮಾದ ಹೈಲೈಟ್. ಸಾಧು ಕೋಕಿಲ, ಟೆನ್ನಿಸ್ ಕೃಷ್ಣ ಕಾಮಿಡಿ ನೋಡುಗರಿಗೆ ಹೊಟ್ಟೆ ತುಂಬಾ ನಗಿಸುತ್ತದೆ. ಭಜರಂಗಿ ಲೋಕಿ ವಿಲನ್ ಆಗಿದ್ದರೂ ಕಾಮಿಡಿ ಕಚಗುಳಿ ನೀಡುತ್ತಾರೆ.
ಚಿನ್ನಿ ಪ್ರಕಾಶ್, ಗಣೇಶ್, ರಾಜು ಸುಂದರ್ ಕೊರಿಯೋಗ್ರಫಿ ಮಾಡಿದ್ದು, ಎಲ್ಲಾ ಡ್ಯಾನ್ಸ್ ಗಳು ಸೂಪರ್ ಆಗಿವೆ. ನಿರ್ದೇಶಕ ವೈ.ಎನ್. ರುದ್ರಮುನಿ ಕೈಚಳಕದಿಂದ ಲೋಕಲ್ ಟ್ರೈನ್ ಸಿನಿಮಾ ಅಚ್ಚುಕಟ್ಟಾಗಿ ತೆರೆಯ ಮೇಲೆ ಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!