ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಕಲಾವಿದರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡದಲ್ಲಿ ನಟ ಧನಂಜಯ್ ಅವರಿಗೆ ‘ಬಡವ ರಾಸ್ಕಲ್’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಯಿತು. ಯಜ್ಞಾಶೆಟ್ಟಿ ಅವರು ‘ಆಕ್ಟ್ 1978’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪದೆದರು.
ರಾಜ್ ಬಿ. ಶೆಟ್ಟಿ ಅವರಿಗೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ನೀಡಲಾಯಿತು.
ಕನ್ನಡ ವಿಭಾಗ:
ಅತ್ಯುತ್ತಮ ನಟ- ಧನಂಜಯ್ (ಬಡವ ರಾಸ್ಕಲ್)
ಅತ್ಯುತ್ತಮ ನಟಿ- ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ – ಆಕ್ಟ್ 1978
ಅತ್ಯುತ್ತಮ ನಿರ್ದೇಶಕ – ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೋಷಕ ಅತ್ಯುತ್ತಮ ನಟ (ಪುರುಷ) – ಬಿ. ಸುರೇಶ (ಆಕ್ಟ್ 1978)
ಪೋಷಕ ಅತ್ಯುತ್ತಮ ನಟಿ (ಮಹಿಳೆ) – ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ – ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ – ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ – ರಘು ದೀಕ್ಷಿತ್- ಮಲೇ ಮಲೇ ಮಲೇ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಅತ್ಯುತ್ತಮ ಛಾಯಾಗ್ರಹಣ – ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ – ಜಾನಿ ಮಾಸ್ಟರ್ – ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ – ಪುನೀತ್ ರಾಜ್ಕುಮಾರ್
ತೆಲುಗು ವಿಭಾಗ:
ಅತ್ಯುತ್ತಮ ನಟ (ಪುರುಷ) – ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನಟಿ (ಮಹಿಳೆ) – ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಚಿತ್ರ – ಪುಷ್ಪ: ದಿ ರೈಸ್- ಭಾಗ 1
ಅತ್ಯುತ್ತಮ ನಿರ್ದೇಶಕ – ಸುಕುಮಾರ್ ಬಂಡ್ರೆಡ್ಡಿ (ಪುಷ್ಪಾ: ದಿ ರೈಸ್- ಭಾಗ 1)
ಪೋಷಕ ಅತ್ಯುತ್ತಮ ನಟ- ಮುರಳಿ ಶರ್ಮಾ (ಅಲಾ ವೈಕುಂಠಪುರಮುಲೂ)
ಪೋಷಕ ಅತ್ಯುತ್ತಮ ನಟಿ- ಟಬು (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಸಾಹಿತ್ಯ – ಸೀತಾರಾಮ ಶಾಸ್ತ್ರಿ – ಲೈಫ್ ಆಫ್ ರಾಮ್ (ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕ- ಸಿದ್ ಶ್ರೀರಾಮ್ – ಶ್ರೀವಲ್ಲಿ (ಪುಷ್ಪಾ: ದಿ ರೈಸ್- ಭಾಗ 1)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಇಂದ್ರಾವತಿ ಚೌಹಾಣ್ – ಊ ಅಂತವ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನೃತ್ಯ ಸಂಯೋಜನೆ – ಶೇಖರ್ ಮಾಸ್ಟರ್ – ರಾಮುಲೂ ರಾಮುಲಾ (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಛಾಯಾಗ್ರಹಣ – ಮಿರೋಸ್ಲಾ ಕುಬಾ ಬ್ರೋಜೆಕ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ಚೊಚ್ಚಲ ನಟ – ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ಚೊಚ್ಚಲ ನಟಿ – ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನದ ಸಾಧನೆ ಪ್ರಶಸ್ತಿ – ಅಲ್ಲು ಅರವಿಂದ್
ತಮಿಳು ವಿಭಾಗ:
ಅತ್ಯುತ್ತಮ ನಟ – ಸೂರ್ಯ (ಸೂರರೈ ಪೊಟ್ರು)
ಅತ್ಯುತ್ತಮ ನಟಿ- ಲಿಜೋಮೋಲ್ ಜೋಸ್ (ಜೈ ಭೀಮ್)
ಅತ್ಯುತ್ತಮ ಚಿತ್ರ – ಜೈ ಭೀಮ್
ಅತ್ಯುತ್ತಮ ನಿರ್ದೇಶಕ – ಸುಧಾ ಕೊಂಗರ (ಸೂರರೈ ಪೊಟ್ರು)
ಪೋಷಕ ಅತ್ಯುತ್ತಮ – ಪಶುಪತಿ (ಸರಪತ್ತ ಪರಂಬರೈ)
ಪೋಷಕ ನಟಿ – ಊರ್ವಶಿ (ಸೂರರೈ ಪೊಟ್ರು)
ಅತ್ಯುತ್ತಮ ಸಂಗೀತ ಆಲ್ಬಮ್ – ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕ- ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ- ಆಗಸಂ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಧೀ- ಕಟ್ಟು ಪಾಯಲೆ (ಸೂರರೈ ಪೊಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ – ದಿನೇಶ್ ಕುಮಾರ್ – ವತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಹಣ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೊಟ್ರು)
ಮಲಯಾಳಂ ವಿಭಾಗ:
ಅತ್ಯುತ್ತಮ ನಟ- ಬಿಜು ಮೆನನ್ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ನಟಿ- ನಿಮಿಷಾ ಸಜಯನ್ (ದ ಗ್ರೇಟ್ ಇಂಡಿಯನ್ ಕಿಚನ್)
ಅತ್ಯುತ್ತಮ ಚಿತ್ರ – ಅಯ್ಯಪ್ಪನಂ ಕೋಶಿಯಂ
ಅತ್ಯುತ್ತಮ ನಿರ್ದೇಶಕ – ಸೆನ್ನಾ ಹೆಗ್ಡೆ (ತಿಂಕಾಲಜ್ಞಾ ನಿಶ್ಚಯಂ)
ಪೋಷಕ ನಟ – ಜೋಜು ಜಾರ್ಜ್ (ನಾಯಟ್ಟು)
ಪೋಷಕ ನಟಿ – ಗೌರಿ ನಂದಾ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಸಂಗೀತ ಆಲ್ಬಮ್ – ಎಂ. ಜಯಚಂದ್ರನ್ (ಸೂಫಿಯಂ ಸುಜಾತಯಂ)
ಅತ್ಯುತ್ತಮ ಸಾಹಿತ್ಯ – ರಫೀಕ್ ಅಹಮದ್ – ಅರಿಯತರಿಯತೆ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಹಿನ್ನೆಲೆ ಗಾಯಕ – ಶಹಬಾಜ್ ಅಮಾನ್ – ಆಕಾಶಮಾಯವಳೆ (ವೆಲ್ಲಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕೆ.ಎಸ್.ಚಿತ್ರ-ತೀರಮೆ (ಮಲಿಕ್)
___
Be the first to comment