‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಟೈಟಲ್ ಲಾಂಚ್

ಅರುಣ್‍ಕುಮಾರ್.ಎಂ ಮತ್ತು ಸಬುಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಲಿದ್ದಾರೆ. ಇವರಿಬ್ಬರಿಗೂ ಎರಡು ದಶಕಗಳ ಕಾಲ ಜಾಹಿರಾತು ಕ್ಷೇತ್ರದಲ್ಲಿ ಮುದ್ರಾ ಕಮ್ಮುನಿಕೇಶನ್ಸ್, ಪಬ್ಲಿಸಿಸ್, ಹೆಡ್ಜ್ ಇಕ್ವಿಟೀಸ್, ವಿಲ್ರ್ಪೂಲ್, ಪಂಕಜಕಸ್ತೂರಿ, ಬ್ಲಾಸಮ್‍ಇನ್ನರ್ಸ್, ವಿಗಾರ್ಡ್, ಆಸ್ಟರ್‍ಮೆಡ್ಸಿಟಿ, ಅಕ್ಯುಮೆನ್ ಕ್ಯಾಪಿಟಲ್, ಎನ್‍ಆರ್‍ಹೆಚ್‍ಎಂ ಹೀಗೆ ಸಾಕಷ್ಟು ಕಂಪೆನಿಗಳಿಗೆ ಕೆಲಸ ಮಾಡಿದ ಅನುಭವವಿದೆ.

ಪೋಸ್ಟರ್‍ದಲ್ಲಿ ನಾಯಕನ ಜೀವನವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಖಾಲಿ ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡುವ ನಾಯಕನ ಪೋಸ್ಟರ್ ಹತ್ತು ಹಲವು ವಿಚಾರಗಳನ್ನು ಹೊತ್ತು ತಂದಿದೆ. ಜೊತೆಗೆ ಸೂರ್ಯ ಮತ್ತು ಪ್ರಕೃತಿಯೊಂದಿಗಿನ ಜೀವನದ ಸಮಾಗಮವನ್ನು ತಿಳಿಸುತ್ತದೆ.ಆತನ ಸುಂದರ ದಿನಗಳನ್ನು ನೆನಪಿಸುವ ಹಲವು ಸಂಗತಿಗಳು ಇರುವುದು ವಿಶೇಷ. ಪೋಸ್ಡರ್‍ದಲ್ಲಿ ನಾಯಕನ ಮುಖ ಬಹಿರಂಗವಾಗಿಲ್ಲದಿದ್ದರೂ ಪೃಥ್ವಿಅಂಬರ್ ಸದರಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಮಮ್ಮಿ, ದೇವಕಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಲೋಹಿತ್.ಹೆಚ್ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಸಿಲ್ವರ್ ಟ್ರೈನ್ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಫ್ರೈಡೇ ಫಿಲ್ಮ್ ಬ್ಯಾನರ್ ಅಡಿಯಲ್ಲಿ ತಮ್ಮ ಮೊದಲ ಚಿತ್ರವನ್ನು ತಯಾರಿಸಲಿದ್ದಾರೆ.

ಆದರೂ ಸಿನಿಮಾದ ನಿರ್ಮಾಪಕರಾಗಿ ಕಿಶೋರ್‍ನರಸಿಂಹಯ್ಯ ಎಂದು ಹೇಳುತ್ತಾರೆ. ಅರೇನಾ ಅನಿಮೇಶನ್ ನಿರ್ದೇಶಕರಾಗಿರುವ ಖ್ಯಾತ ಉದ್ಯಮಿ ಕಿಶೋರ್‍ನರಸಿಂಹಯ್ಯ ಅವರು ಲೋಹಿತ್.ಹೆಚ್ ಜೊತೆಗೆ ಪಾಲುದಾರಿಕೆಯಲ್ಲಿ ಫ್ರೈಡೇ ಫಿಲ್ಮ್ ಶುರು ಮಾಡಿದ್ದರೆ. ಇದರ ಮೂಲಕ ಗುಣಮಟ್ಟದ ಸಿನಿಮಾಗಳನ್ನು ತಯಾರಿಸುವ ಮುಖ್ಯ ಗುರಿಯನ್ನು ಸಂಸ್ಥೆಯು ಹೊಂದಿದೆ.

This Article Has 2 Comments
  1. Pingback: https://gogoanime.cam/

  2. Pingback: Casino

Leave a Reply

Your email address will not be published. Required fields are marked *

Translate »
error: Content is protected !!