ಪ್ರಮೋದ್ ಶೆಟ್ಟಿ ಅವರು ಅಭಿನಯಿಸಿರುವ ‘ಲಾಫಿಂಗ್ ಬುದ್ಧ’ ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ.
ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭವಾಗಿದೆ. ವೀಕೆಂಡ್ ಮನೆಯಲ್ಲೇ ಕೂತು ಸಿನಿಪ್ರೇಮಿಗಳು ಫ್ಯಾಮಿಲಿ ಜತೆ ಕೂತು ಸಿನಿಮಾ ಎಂಜಾಯ್ ಮಾಡಬಹುದು.
ನಿವೃತ್ತ ಪೊಲೀಸ್ ಆಫೀಸರ್ ಎಸ್.ಕೆ.ಉಮೇಶ್ ಇಲ್ಲಿ ಪೊಲೀಸ್ ಅಧಿಕಾರಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿಗೆ ನಟಿ ತೇಜು ಬೆಳವಾಡಿ ಜೋಡಿ ಆಗಿದ್ದಾರೆ. ಪ್ರಮೋದ್ ಶೆಟ್ಟಿ ಅವರು ಗೋವರ್ಧನ್ ಪಾತ್ರದಲ್ಲಿ ಮಿಂಚಿದ್ದಾರೆ.
ಕಾನ್‌ಸ್ಟೇಬಲ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಬಾಡಿ ಶೇಮಿಂಗ್ ಕೇಸನ್ನುಹೇಗೆ ನಿಭಾಯಿಸುತ್ತಾರೆ ಎನ್ನುವುದು ಇದೆ. ಈ ಸಿನಿಮಾಗಾಗಿ ಪ್ರಮೋದ್ ಶೆಟ್ಟಿ 30 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು.
ಎಂ. ಭರತ್ ರಾಜ್ ನಿರ್ದೇಶನದ ಕಾಮೆಡಿ ಎಂಟರ್‌ಟೈನರ್ ‘ಲಾಫಿಂಗ್ ಬುದ್ಧ’ ಆಗಸ್ಟ್ 30ಕ್ಕೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಚಂದ್ರಶೇಖರ್ ಛಾಯಾಗ್ರಹಣ, ವಿಷ್ಣು ವಿಜಯ್ ಸಂಗೀತ ಇದೆ. ಕೆಆರ್‌ಜಿ ಸ್ಟುಡಿಯೋ ಸಿನಿಮಾ ವಿತರಣೆ ಮಾಡಿತ್ತು. ಲಾಫಿಂಗ್ ಬುದ್ಧ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದಾರೆ.
Be the first to comment