‘ಗಾಂಧಿ ಜಯಂತಿ’ ಯ ಪ್ರಯುಕ್ತ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಲಂಕೇಶ್ ಆಪ್ ಮತ್ತು ಲಂಕೇಶ್ ಆಡಿಯೋ ಬುಕ್ಸ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು “ಲಂಕೇಶ್ ಆತ್ಮಕತೆ ಆಡಿಯೋ ಬುಕ್ಸ್” ನ ತುಣುಕು (ಟ್ರೈಲರ್)ಗಳ ಉದ್ಘಾಟನೆ ಮಾಡಿ ಇಂದಿನ ಯುವಪೀಳಿಗೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಜ್ಞಾನಕ್ಕೆ ಬಳಸುತ್ತಿದ್ದಾರೆ. ಲಂಕೇಶ್ ಆಪ್ ಪ್ರಸ್ತುತ ಓದುಗರಿಗೆ ಅನುಕೂಲವಾಗಿದ್ದು ಲಂಕೇಶರ ಬರಹಗಳು ಅವರ ಮೇಲೆ ಪರಿಣಾಮ ಬಿರುತ್ತದೆ ಎಂದರು.
ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಯವರು “ಲಂಕೇಶ್ ಆಪ್” ಬಿಡುಗಡೆ ಮಾಡಿ ಪಿ. ಲಂಕೇಶರು ಸಾಹಿತಿಯಾಗಿ, ಪತ್ರಕರ್ತರಾಗಿ ನಮ್ಮ ನಾಡಿಗೆ ತಮ್ಮ ಲೇಖನಗಳ ಮೂಲಕ ಎಲ್ಲ ಸಮಾಜ ಒಪ್ಪುವಂತಹ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ನಟ ಡಾ/ಶಿವರಾಜ್ ಕುಮಾರ್ ಮಾತನಾಡಿ ನಿಜಕ್ಕೂ ಈ ಸಮಾರಂಭ ಅರ್ಥ ಗರ್ಭಿತವಾಗಿತ್ತು. ಹಿರಿಯರ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸಿತು. ಇಂದ್ರಜಿತ್ ಲಂಕೇಶ್ ಮತ್ತು ನಾನು ಪರಮಾಪ್ತರು. ಈ ಕಾರ್ಯಕ್ರಮಕ್ಕೆ ಬಂದಿದ್ದು ನಿಜಕ್ಕೂ ಪ್ರಯೋಜನ ಅನಿಸಿತು. ನಾನಿನ್ನು ಕಲಿಯುವ ವಿದ್ಯಾರ್ಥಿಯಾಗಿದ್ದು, ನಾನು ಹೆಚ್ಚು ಮಾತನಾಡುವಷ್ಟು ಜ್ಞಾನ ಸಂಪಾದಿಸಿಲ್ಲ ಎಂದರು.
ಇಂದ್ರಜಿತ್ ಲಂಕೇಶ್ ಪ್ರಾಸ್ತಾವಿಕ ಭಾಷಣ ಮಾಡಿ, ರಾಜ್ ಕುಮಾರ್ ಇಲ್ಲದೆ ಯಾವ ಹೋರಾಟಗಳು ಇರಲಿಲ್ಲವೋ, ಹಾಗೆಯೇ ನಮ್ಮ ಅಪ್ಪನ ಬರಹಳಿಲ್ಲದೆ ಸಾಮಾಜಿಕ ಸುಧಾರಣೆ ತರಲು ಸಾಧ್ಯವಾಗುತ್ತಿರಲಿಲ್ಲ . ಗೋಕಾಕ್ ಹೋರಾಟದಲ್ಲಿ ಡಾ.ರಾಜ್ ಪಾತ್ರ ಮಹತ್ವದ್ದು ಮತ್ತು ಅಪ್ಪನ ಸಾಥ್ ಡಾ. ರಾಜ್ ಗಿತ್ತು ಎಂದು ಹೇಳಿದರು. ಅವರ ಮಗ ಶಿವರಾಜ್ ಕುಮಾರ್, ಅವರ ತಂದೆಯಂತೆ ಹೋರಾಟದ ಮುಖಂಡತ್ವ ವಹಿಸಲಿ. ಅದಕ್ಕೆ ಪತ್ರಿಕೆಯ ಬೆಂಬಲ ಇದೆ ಎಂದರು.
LankeshApp Link >>
Be the first to comment