ಸೆ.20ಕ್ಕೆ ‘ಲಂಗೋಟಿ ಮ್ಯಾನ್’ ಬಿಡುಗಡೆ

ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಚಿತ್ರ ಸೆ.20ರಂದು ತೆರೆಗೆ ಬರಲಿದೆ.

‘ಸಿನಿಮಾ ಬಟ್ಟೆ ಕುರಿತಾದ ಕಥೆ ಹೊಂದಿದೆ. ಮನುಷ್ಯರು ಬಟ್ಟೆ ಧರಿಸಲು ಪ್ರಾರಂಭವಾಗಿದ್ದು ಲಂಗೋಟಿಯಿಂದ. ಅದಕ್ಕಾಗಿಯೇ ಈ ಶೀರ್ಷಿಕೆ ಇಡಲಾಗಿದೆ. ಎಲ್ಲ ಜಾತಿ, ಧರ್ಮದವರು ಲಂಗೋಟಿ ತೊಡುತ್ತಾರೆ. ಹೀಗಾಗಿ ಯಾರನ್ನು ನೋಯಿಸುವ ಉದ್ದೇಶ ಇಲ್ಲ. ಯುವಕರನ್ನು ಕೇಂದ್ರಿಕೃತವಾಗಿರುವ ಹಾಸ್ಯಮಯ ಈ ಚಿತ್ರದ ವಿಶೇಷವೆಂದರೆ ತಂಡದಲ್ಲಿ ಸಾಕಷ್ಟು ಮಹಿಳಾ ತಂತ್ರಜ್ಞರಿದ್ದಾರೆ’ ಎನ್ನುತ್ತಾರೆ ಸಂಜೋತ.

‘ಲಂಗೋಟಿ ಮ್ಯಾನ್’  ತನು ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಆಕಾಶ್ ರ‍್ಯಾಂಬೋ, ಸ್ನೇಹ ಖುಷಿ, ಸಂಹಿತಾ ವಿನ್ಯಾ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್‌ ಮುಂತಾದವರು ಚಿತ್ರದಲ್ಲಿದ್ದಾರೆ.

ಪ್ರಮೋದ್ ಮರವಂತೆ ‘ಲಂಗೋಟಿ’ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುಮೆದ್ ಕೆ ಸಂಗೀತ ಸಂಯೋಜಿಸಿದ್ದಾರೆ. ಚೇತನ್ ನಾಯ್ಕ್ ಹಾಗೂ ಸುಮೆದ್ ಈ ಹಾಡಿಗೆ ದನಿಗೂಡಿಸಿದ್ದಾರೆ.

ಚಿತ್ರದ ‘ಲಂಗೋಟಿ ಬಲು ಒಳ್ಳೇದಣ್ಣ…’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!