ಚಿತ್ರ: ಲಂಗೋಟಿ ಮ್ಯಾನ್
ನಿರ್ದೇಶಕಿ: ಸಂಜೋತಾ ಭಂಡಾರಿ
ತಾರಾಗಣ: ಆಕಾಶ್ ರ್ಯಂಬೋ, ಸ್ನೇಹಾ ಖುಷಿ, ಸಂಹಿತ ವಿನ್ಯ, ಹುಲಿ ಕಾರ್ತಿಕ್
ರೇಟಿಂಗ್: 3.5
ತಲೆಮಾರುಗಳ ಸಂಘರ್ಷದಿಂದ ಯಾವ ರೀತಿ ಕೌಟಿಂಬಿಕವಾಗಿ ಸಮಸ್ಯೆ ಉಂಟಾಗಬಹುದು ಎನ್ನುವುದನ್ನು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಲಂಗೋಟಿ ಮ್ಯಾನ್.
ಸಾಂಪ್ರದಾಯಿಕ ಪುರೋಹಿತ ಕುಟುಂಬಕ್ಕೆ ಸೇರಿದ ತಾತನಿಗೆ ಕುಟುಂಬದ ಎಲ್ಲರೂ ಲಂಗೋಟಿ ಧರಿಸಬೇಕು ಎನ್ನುವ ನಿಲುವು. ಆದರೆ ಹೊಸ ತಲೆಮಾರಿನ ಹುಡುಗ ತೀರ್ಥನಿಗೆ ಇದು ರುಚಿಸುವುದಿಲ್ಲ. ತನ್ನ ಸಹಪಾಠಿಗಳಿಂದ ಗೇಲಿಗೆ ಒಳಗಾಗುವ ಅವನಿಗೆ ಲಂಗೋಟಿ ಸಮಸ್ಯೆಯಾಗಿ ಕಾಡುತ್ತದೆ. ಪರಂಪರೆಯ ನಿಯಮವನ್ನು ಮೀರಲು ಹೋಗುವ ಅವನಿಗೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ನಿರ್ದೇಶಕರು ಚಿತ್ರದಲ್ಲಿ ಪರಂಪರೆ ಹಾಗೂ ಆಧುನಿಕತೆ ನಡುವಿನ ಸಂಘರ್ಷವನ್ನು ಹೇಳುವ ಯತ್ನವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ಸ್ಟೋರಿ ಲೈನ್ ಇದ್ದು ಇದು ಹಾಸ್ಯದಿಂದ ಆರಂಭಗೊಂಡು ಮಧ್ಯಂತರದ ಬಳಿಕ ಗಂಭೀರವಾಗುತ್ತದೆ. ನಿರ್ದೇಶಕರು ಇಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ.
ಚಿತ್ರ ಒಂದಷ್ಟು ತಾಳ್ಮೆಯನ್ನು ಪ್ರೇಕ್ಷಕರಿಂದ ಬಯಸುತ್ತದೆ. ಸಹನೆಯ ಮಾರ್ಗವನ್ನು ತುಳಿಯುವವರಿಗೆ ಸಿನಿಮಾ ಇಷ್ಟವಾಗಬಹುದು.
ಆಕಾಶ್ ರ್ಯಂಬೋ ಚಿತ್ರದಲ್ಲಿ ಚುರುಕಾಗಿ ನಟಿಸಿದ್ದಾರೆ. ಸಿನಿಮಾದ ಇತರ ಪಾತ್ರಧಾರಿಗಳ ನಟನೆ ಕತೆಗೆ ಪೂರಕವಾಗಿದೆ.
Be the first to comment