ಮೇಘಾ ಕಂಬೈನ್ಸ್ ವತಿಯಿಂದ ತಯಾರಾಗುತ್ತಿರುವ ಚಿತ್ರ ‘ಲಕ್ಷ್ಯ’ದ ಧ್ವನಿ ಸಾಂದ್ರಿಕೆಯ ಲೋಕಾರ್ಪಣೆ ಅದ್ಧೂರಿಯಾಗಿ ನೆರವೇರಿತು.
ಸಾಕಷ್ಟು ಯುವ ಕಲಾವಿದರೇ ತುಂಬಿಕೊಂಡಿದ್ದರೂ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿರುವ ಹಿರಿಯ ನಟ ರಾಮಕೃಷ್ಣ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ರಾಮು ಎನ್ನುವ ಪಾತ್ರವನ್ನು ನಿರ್ವಹಿಸುತ್ತಿರುವ ಅವರು ಚಿತ್ರ ತಂಡದ ಬಗ್ಗೆ, ನಿರ್ಮಾಪಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮಾಧ್ಯಮ ಕ್ಷೇತ್ರದಲ್ಲಿ ಇದ್ದುಕೊಂಡು ನಿರ್ದೇಶನ ಕ್ಷೇತ್ರಕ್ಕೆ ಪ್ರವೇಶಿಸಿರುವ ರವಿ ಸಾಸನೂರು ಅವರಿಗೆ ಇದು ಪ್ರಥಮ ಚಿತ್ರ. ಆದರೆ ಕಳೆದ ವರ್ಷ ‘ಫಲಿತಾಂಶ’ ಎನ್ನುವ ಕಿರುಚಿತ್ರದ ಮೂಲಕ ಗಮನ ಸೆಳೆದ ರವಿಯವರು ಈ ಬಾರಿ ಚಿತ್ರದ ಮೋಶನ್ ಪೋಸ್ಟರ್ ಮೂಲಕವೂ ಮಾತನಾಡಿದ್ದಾರೆ. ಮಾಲತಮ್ಮ ಮತ್ತು ಶಿವು ಅವರ ಸಹಕಾರದಿಂದಲೇ ಈ ಚಿತ್ರ ಪೂರ್ತಿಯಾಗಲು ಸಾಧ್ಯವಾಯಿತು ಎನ್ನುವುದು ನಿರ್ದೇಶಕರ ಅನಿಸಿಕೆ. ಲಕ್ಷ್ಯದ ಲಕ್ಷ್ಯ ತಲುಪುವಲ್ಲಿ ರಾಘವೇಂದ್ರ ಸ್ವಾಮಿಯ ಕೃಪೆಯೂ ಇದೆ ಎನ್ನುವುದು ಅವರ ಅನಿಸಿಕೆ.
ಚಿತ್ರದ ಸಂಗೀತ ನಿರ್ದೇಶಕ ಜುವಿನ್ ಸಂಗೀತದಲ್ಲಿ ಮೂಡಿ ಬಂದ ಎರಡು ಆಕರ್ಷಕ ಗೀತೆಗಳ ಲಿರಿಕಲ್ ಪ್ರದರ್ಶನ ನಡೆಯಿತು. ಒಂದು ಗೀತೆ ಖ್ಯಾತ ಗಾಯಕಿ ಅನುರಾಧ ಭಟ್ ಕಂಠದಲ್ಲಿದ್ದರೆ ಮತ್ತೊಂದು ಹಾಡಿಗೆ ಜಸ್ಸಿ ಗಿಫ್ಟ್ ಗಾಯಕರಾಗಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಜಸ್ಸಿ ಮಾತನಾಡಿ, ಸಂಗೀತ ನಿರ್ದೇಶಕರನ್ನು ಪ್ರಶಂಸಿಸಿದರು. ಜುವಿನ್ ಸಿಂಗ್ ತಮ್ಮ ಎಒನ್ ಎಂಟರ್ಟೇನ್ಮೆಂಟ್ ಸಂಸ್ಥೆಯ ಆರಂಭದ ಬಗ್ಗೆ ಕೂಡ ಖುಷಿ ಹಂಚಿಕೊಂಡರು.
ಲಕ್ಷ್ಯ ಚಿತ್ರದ ಪ್ರಧಾನ ಪಾತ್ರಧಾರಿ ನಿತಿನ್ ಪ್ರಕಾರ ಅವರು ಚಿತ್ರದಲ್ಲಿ ಪಿಕೆ ಎಙದೇ ಕರೆಸಲ್ಪಡುತ್ತಾರೆ. ಅಂದಹಾಗೆ ಅವರ ಹೆಸರು ಪೃಥ್ವಿ ಕುಮಾರ್ ಎಂದು ಇರುತ್ತದೆ. ಸದಾ ಕುಚೇಷ್ಟೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿತ್ವ ಅವರದು. ಧನಲಕ್ಷ್ಮಿ ಎನ್ನುವ ನಾಯಕಿಯ ಪಾತ್ರವನ್ನು ನಿಭಾಯಿಸಿರುವ ಯಶಸ್ವಿನಿ ಮಾತನಾಡಿ ನಾನು ಚಿತ್ರದಲ್ಲಿ ಮಾತ್ರ ಡೀಸೆಂಟ್ ಗರ್ಲ್ ಎಂದು ಆಚ್ಚರಿ ಮೂಡಿಸಿದರು!
ನಿರ್ಮಾಪಕ ಮಹಾಂತೇಶ್ ಗೋಕಾಕ್, ಸಹ ನಿರ್ಮಾಪಕ ಪ್ರಕಾಶ್ ಕೋಲಾರ, ಹಿರಿಯ ನಟ ದೊಡ್ಡಣ್ಣ, ಮಾಲತಿ ಶ್ರೀ, ನಟ ಸತ್ಯನಾಥ್, ಅತಿಥಿಗಳಾಗಿ ವಾಣಿಜ್ಯ ಮಂಡಳಿಯಿಂದ ಬಾ.ಮ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

Pingback: plumber Angier
Pingback: Buy Sex Toys Online
Pingback: articles on sex in advertising