ಬರುತ್ತಿದೆ ‘ಲಕ ಲಕ ಲ್ಯಾಂಬೋರ್ಗಿನಿ’

ಚಂದನ್​ ಶೆಟ್ಟಿ ಮತ್ತು ರಚಿತಾ ರಾಮ್​ ಕಾಣಿಸಿಕೊಂಡಿರುವ ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿನ ಪೋಸ್ಟರ್​ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಕಾತರ ಮೂಡಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಚಂದನ್ ಶೆಟ್ಟಿ ಹೊಸ ವರ್ಷಕ್ಕಾಗಿ ಹೊಸ ಹಾಡೊಂದನ್ನು ತಯಾರಿ ಮಾಡಿದ್ದಾರೆ. ಚಂದನ್ ಶೆಟ್ಟಿ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಚಂದನ್ ಶೆಟ್ಟಿ ಅವರು ರಾಕ್‌ಸ್ಟಾರ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರಚಿತಾ ರಾಮ್ ಅವರು ಗ್ಲಾಮರಸ್ ಆಗಿ ಗಮನ ಸೆಳೆಯುತ್ತಿದ್ದಾರೆ. ಚಂದನ್ ಶೆಟ್ಟಿ ಇದುವರೆಗೆ ಸಾಕಷ್ಟು ಆಲ್ಬಂ ಹಾಡುಗಳಲ್ಲಿ ಕನ್ನಡದ ನಟಿಯರ ಜೊತೆಗೆ ಡಾನ್ಸ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ಜೊತೆಗೆ ಚಂದನ್‌ ಶೆಟ್ಟಿ ಆಲ್ಬಂ ಮಾಡುತ್ತಿದ್ದು ಗಮನ ಸೆಳೆದಿದ್ದಾರೆ.

ಹಾಡಿಗೆ ‘ ಅಲೆಲೆಲೇಲೆ ಇವಳು ಚೆಂದಾಗವ್ಳೆ’ ಎನ್ನುವ ಸಾಹಿತ್ಯ ಇದೆ. ಪೂರ್ತಿ ಹಾಡು ರಿಲಿಸ್‌ ಆಗುವವರೆಗೂ ಕಾಯಬೇಕಿದೆ. ರಚಿತಾ ರಾಮ್‌ ಸ್ಟೈಲಿಶ್‌ ಆಗಿ ಮೈ ಬಳುಕಿಸಿದ್ದು, ಅವರ ಲುಕ್‌ ಗಮನ ಸೆಳೆದಿದೆ.

ಚಂದನ್ ಶೆಟ್ಟಿ ನಿರ್ದೇಶನ ಮಾಡಿದ ಕೊನೆಯ ಆಲ್ಬಂ ಹಾಡು ‘ಪಾರ್ಟಿ ಫ್ರಿಕ್’. ಇದರಲ್ಲಿ ನಟಿ ನಿಶ್ವಿಕಾ ನಾಯ್ಡು, ಚಂದನ್‌ ಪತ್ನಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಹೊಸ ಹಾಡಿನಲ್ಲಿ ರಚಿತಾ ರಾಮ್ ಜೊತೆಗೆಚಂದನ್ ಶೆಟ್ಟಿ ಜತೆಯಾಗಿದ್ದು, ಈ ಹಾಡು ಪಾರ್ಟಿ ಸಂಗೀತ ಪ್ರಿಯರಿಗೆ ಇಷ್ಟವಾಗುವ ನಿರೀಕ್ಷೆ ಹೊಂದಲಾಗಿದೆ. ಈ ಹಾಡನ್ನು ನಂದ ಕಿಶೋರ್‌ ನಿರ್ದೇಶನ ಮಾಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!