ಚಂದನವನಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಇತ್ತೀಚೆಗೆ ಮೊದಲು ಮುಖ ಮಾಡುವುದು ಆಲ್ಬಂ, ಕಿರುಚಿತ್ರಗಳತ್ತ. ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಇವೆರಡು ಉತ್ತಮ ವೇದಿಕೆಯಾಗುತ್ತಿವೆ. ಇದರ ಮೂಲಕವೇ ಭರವಸೆ ಮೂಡಿಸಿ ಹಿರಿತೆರೆಗೆ ಮುಂದಾಗಿರುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಈ ಸಾಲಿಗೆ ‘ಏ ಸೋನಾ’ ಒಂದು ಗೀತೆಯ ಆಲ್ಬಂ ಸೇರಿಕೊಂಡಿದೆ. ಇಬ್ಬರು ಹುಡುಗರು ಒಬ್ಬಳನ್ನು ಪ್ರೀತಿಸುವುದು. ಕ್ಲೈಮಾಕ್ಸ್‍ನಲ್ಲಿ ಗೆಳಯನಿಗಾಗಿ ತ್ಯಾಗ ಮಾಡುವ ಹಾಡು ಇದಾಗಿದೆ. ರಘುಪಡುಕೋಣೆ, ಸರಿಗಮಪದ ಖ್ಯಾತಿಯ ಸುನಿಲ್ ಸಾಹಿತ್ಯದ ಜೊತೆಗೆ ನಟನೆ ಮಾಡಿದ್ದು, ಶಾಲಿನಿಗೌಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಗನ ಪ್ರತಿಭೆಗೆ ಮಾರುಹೋಗಿ ನಿರ್ಮಾಣ ಮಾಡಿರುವುದು ಕನ್ನಡ ರಕ್ಷಣಾ ವೇದಿಕೆ ಶಿವಾಜಿನಗರ ಪ್ರಾಂತ್ಯದ ಅಧ್ಯಕ್ಷ ಎಂ.ಬಸವರಾಜ್‍ಪಡುಕೋಣೆ .
ಅಪ್ಪನ ಅಣತಿಯಂತೆ ‘ಯಾರ್‍ಮಗ’ ಚಿತ್ರಕ್ಕೆ ಕತೆ ಬರೆದು ನಾಯಕನಾಗಿ ನಟಿಸುತ್ತಿರುವ ಸಿನಿಮಾದ ಪೋಸ್ಟರ್‍ನ್ನು ಲಹರಿವೇಲು ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ ರಘು ಮೈಕ್ ಹಿಡಿದುಕೊಂಡಾಗ ಕಣ್ಣುಗಳು ಒದ್ದ್ದೆಯಾಗಿದ್ದನ್ನು ಕಂಡು ಹಳೆಯ ದಿನಗಳು ನೆನಪಿಗೆ ಬಂದವು. ನಾನು ಸಹ ಅವಮಾನ, ಕಷ್ಟಗಳನ್ನು ಎದುರಿಸಿ ಬಂದವನು. ಯಾರ ಕಣ್ಣಲ್ಲಿ ನೀರು ಬರುತ್ತದೋ ಅವರು ಮನುಷ್ಯರೆಂದು ಬಣ್ಣಸಿ ತಂಡಕ್ಕೆ ಶುಭ ಹಾರೈಸಿದರು. ಚಿಕ್ಕ ಮಚ್ಚನ್ನು ಹಿಡಿದಿರುವ ಕೈಯೊಂದು ಯಜ್‍ಡಿ ಬೈಕ್ ಪಕ್ಕ ಇರುವ ಪೋಸ್ಟರ್ ನೋಡಿದಾಗ ಇದೊಂದು ರೌಡಿಸಂ ಹಿನ್ನಲೆ ಇರುವ ಚಿತ್ರವೆಂದು ಕೇಳಿದಾಗ, ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸುವುದಾಗಿ ನಿರ್ದೇಶಕ ಸುರೇಶ್‍ರಾಜ್ ಜಾರಿಕೊಂಡರು.
ನವನಾಯಕಿ ಅದ್ವಿತಿಪ್ರಭು, ಉಳಿದಂತೆ ಕೆಜಿಎಫ್ ಖ್ಯಾತಿಯ ಗರುಡ, ಗಣೇಶ್‍ರಾವ್, ಅಶ್ವಿನಿಗೌಡ ಮುಂತಾದವರು ನಟಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ನಾರಾಯಣಗೌಡ, ಎಂಪೈರ್ ಹೋಟೆಲ್ ಮಾಲೀಕ ಅಜೀಜ್ ಮುಂತಾದವರು ಹಾಜರಿದ್ದರು. ಬೀಚ್‍ದಲ್ಲಿ ಶ್ರೀಮಂತವಾಗಿ ಸೆರೆಹಿಡಿದಿರುವ ಹಾಡು ಪ್ರಾರಂಭದಲ್ಲಿ ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು.

Pingback: Unicc