L2 ಎಂಪುರಾನ್: 17 ದೃಶ್ಯಗಳಿಗೆ ಕತ್ತರಿ!

ಗುಜರಾತ್ ಗಲಭೆಯ  ಬಗ್ಗೆ ಕೋಲಾಹಲಕ್ಕೆ ಕಾರಣವಾದ L2 ಎಂಪುರಾನ್ ಚಿತ್ರದ  17 ದೃಶ್ಯ ತೆಗೆದುಹಾಕಲು ಚಿತ್ರತಂಡ ನಿರ್ಧರಿಸಿದೆ.

‘ಲೂಸಿಫರ್’ ಫ್ರಾಂಚೈಸ್‌ನ ಎರಡನೇ ಭಾಗವಾದ ‘ಎಂಪುರಾನ್’ ಚಿತ್ರದ ಅಭಿವ್ಯಕ್ತಿಯಲ್ಲಿ ಹೊರಹೊಮ್ಮಿದ ಕೆಲವು ರಾಜಕೀಯ-ಸಾಮಾಜಿಕ ವಿಷಯಗಳು ಚಿತ್ರಪ್ರೇಮಿಗಳಿಗೆ   ನಿರಾಶೆಯನ್ನುಂಟುಮಾಡಿವೆ.. ಒಬ್ಬ ಕಲಾವಿದನಾಗಿ, ನನ್ನ ಯಾವುದೇ ಚಿತ್ರವು ಯಾವುದೇ ರಾಜಕೀಯ ಚಳುವಳಿ, ಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷವನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯ. ನನ್ನ ಪ್ರೀತಿಪಾತ್ರರಿಗೆ ಉಂಟಾದ ಮಾನಸಿಕ ನೋವಿಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಚಿತ್ರದ ಹಿಂದೆ ಕೆಲಸ ಮಾಡಿದ ನಮ್ಮೆಲ್ಲರ ಜವಾಬ್ದಾರಿಯನ್ನು ಅರಿತುಕೊಂಡು, ಜನರ ಭಾವನೆಗಳಿಗ ನೋವುಂಟಾಗಿರುವ ಭಾಗಗಳನ್ನು ಚಿತ್ರದಿಂದ ಕಡ್ಡಾಯವಾಗಿ ತೆಗೆದುಹಾಕಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ”” ಎಂದು ಮೋಹನ್ ಲಾಲ್ ಫೇಸ್‌ಬುಕ್  ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಚಿತ್ರಿಸುವ ಕೆಲವು ದೃಶ್ಯಗಳನ್ನು ಕಡಿತಗೊಳಿಸಲಾಗುವುದು. ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು. ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಎಂದು ತಿಳಿದುಬಂದಿದೆ.

ಈ ಹಿಂದೆ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರು ಚಿತ್ರದಲ್ಲಿ 17 ಕಡೆಗಳಲ್ಲಿ ಕತ್ತರಿ ಪ್ರಯೋಗಕ್ಕೆ ನಿರ್ಧರಿಸಲಾಗಿದೆ. ಹೊಸ ಆವೃತ್ತಿಯು ಮುಂದಿನ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು.

L2 ಎಂಪುರಾನ್ ಎರಡು ದಿನಗಳಲ್ಲಿ  ಬಾಕ್ಸ್ ಆಫೀಸ್‌ನಲ್ಲಿ ಜಾಗತಿಕವಾಗಿ 100 ಕೋಟಿ ರೂ.ಗಳ ಮೈಲಿಗಲ್ಲನ್ನು ದಾಟಿದೆ. ಗುಜರಾತ್ ಗಲಭೆಯ ಕುರಿತಾದ  ಉಲ್ಲೇಖಗಳು  ರಾಜಕೀಯ ವಿವಾದವನ್ನು ಹುಟ್ಟುಹಾಕಿವೆ.  ಸಾಮಾಜಿಕ ಮಾಧ್ಯಮ ಬಳಕೆದಾರರು ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಅವರನ್ನು ಟೀಕಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!