ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಧೋನಿ ಎಂಟರ್ ಟೈನ್ಮೆಂಟ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘L.G.M’ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ.
‘L.G.M’ ಸಿನಿಮಾಗೆ ವಿಕಾಸ್ ಹಸಿಜಾ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಪ್ರಿಯಾಂಶು ಚೋಪ್ರಾ, ‘L.G.M’ ಹೊಸ ಪರಿಕಲ್ಪನೆಯಾಗಿದೆ. ಅನೇಕ ಸ್ವಾರಸ್ಯಕರ ಅಂಶಗಳು ಚಿತ್ರದಲ್ಲಿವೆ. ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗ ಚಿತ್ರದಲ್ಲಿದ್ದಾರೆ ಎಂದಿದ್ದಾರೆ.
ರಮೇಶ್ ಥಮಿಳ್ಮಣಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘L.G.M’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದೆ. ಹರೀಶ್ ಕಲ್ಯಾಣ್, ನದಿಯಾ ಹಾಗೂ ಲವ್ ಟು ಡೇ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗಿ ಬಾಬು ಹಾಗೂ ಮಿರ್ಚಿ ವಿಜಯ್ ತಾರಾಬಳಗದಲ್ಲಿದ್ದಾರೆ.
ರಮೇಶ್ ಥಮಿಳ್ಮಣಿ ಸಿನಿಮಾಗೆ ನಿರ್ದೇಶನ ಮಾಡುವ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಧೋನಿ ಎಂಟರ್ ಟೈನ್ಮೆಂಟ್ ಬ್ಯಾನರ್ ಶುರು ಮಾಡಿರುವ ಧೋನಿ ಅವರು ಪತ್ನಿ ಸಾಕ್ಷಿ ಅವರ ಜತೆಗೂಡಿ ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ಚಿತ್ರ ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
—-
Be the first to comment