ಜೂನ್ ನಲ್ಲಿ ಕೆವಿಎನ್ Vs ಕೆವಿಎನ್?

ಟಾಕ್ಸಿಕ್ ಸಿನಿಮಾ ಮುಂದೂಡಿಕೆ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಕೆವಿಎನ್ Vs ಕೆವಿಎನ್ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಕೆವಿಎನ್ ಸಂಸ್ಥೆ ಮೂರು ದೊಡ್ಡ ಬಜೆಟ್ ಚಿತ್ರಗಳನ್ನು ಕೈಗೆತ್ತಿಕೊಂಡಿತ್ತು. ಜನ ನಾಯಗನ್ ಚಿತ್ರವನ್ನು ಜನವರಿ 9ಕ್ಕೆ, ‘ಟಾಕ್ಸಿಕ್’ ಅನ್ನು ಮಾರ್ಚ್ 19ಕ್ಕೆ ಹಾಗೂ ಕೆಡಿ ಚಿತ್ರವನ್ನು ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿತ್ತು.

ಆದರೆ ಈಗ ‘ಜನ ನಾಯಗನ್’ ಮತ್ತು ‘ಟಾಕ್ಸಿಕ್’ ಎರಡೂ ಚಿತ್ರಗಳು ಮುಂದೂಡಲ್ಪಟ್ಟಿವೆ. ‘ಜನ ನಾಯಗನ್’ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಆಗಿಲ್ಲ. ಜೂನ್ 22ರಂದು ವಿಜಯ್ ಅವರ ಜನ್ಮದಿನದಂದು ‘ಜನ ನಾಯಗನ್’ ಚಿತ್ರವನ್ನು ಬಿಡುಗಡೆ ಮಾಡುವ ಚಿಂತನೆ ಇದೆ ಎನ್ನಲಾಗಿತ್ತು.

‘ಟಾಕ್ಸಿಕ್’ ಜೂನ್ 4ಕ್ಕೆ ಬರುತ್ತಿದೆ. ಹೀಗಾಗಿ ಒಂದೇ ನಿರ್ಮಾಣ ಸಂಸ್ಥೆಯ ಎರಡು ಬಿಗ್ ಬಜೆಟ್ ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಎದುರಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ‘ಕೆವಿಎನ್ vs ಕೆವಿಎನ್’ ಎಂಬ ಪರಿಸ್ಥಿತಿ ನಿರ್ಮಾಣವಾಗಬಹುದೇ ಎಂಬ ಪ್ರಶ್ನೆ ಕಾಡಿದೆ.

ಒಂದೆಬ್ಬ್ಯಾನರ್‌ನ ಎರಡು ದೊಡ್ಡ ಚಿತ್ರಗಳನ್ನು ಒಂದೇ ತಿಂಗಳಲ್ಲಿ ಬಿಡುಗಡೆ ಮಾಡುವುದು ಕಡಿಮೆ. ಈ ಕಾರಣದಿಂದ ಜನ ನಾಯಗನ್ ಬಿಡುಗಡೆ ದಿನಾಂಕದ ಮೇಲೆ ಈಗ ಎಲ್ಲರ ಕಣ್ಣಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!