ಕುತೂಹಲ ಮೂಡಿಸುವ ‘ಕುಷ್ಕ’ಟೀಸರ್ ಸಖತ್ ಸದ್ದು ಮಾಡ್ತಿದೆ !

ಫೆಬ್ರವರಿಗೆ ತೆರೆಗೆ ಬರಲಿದೆ ಮಠ ಗುರು ಪ್ರಸಾದ್ ಅಭಿನಯದ ಚಿತ್ರ.

ಸಿಂಪಲ್ ಸಲುಗೆ.. ಹಾಡಿನ ಲಿರಿಕಲ್ ವಿಡಿಯೋ ಮೂಲಕ ಈಗಾಗಲೇ ಸಾಕಷ್ಟು ಸೌಂಡ್ ಮಾಡಿರುವ ‘ಕುಷ್ಕ ’ ಕನ್ನಡ ಚಿತ್ರ ಈಗ ಟೀಸರ್ ಮೂಲಕ ಸುದ್ದಿ ಮಾಡಿದೆ. ನೋಡುಗರಲ್ಲಿ ಕುತೂಹಲ ಹುಟ್ಟಿಸುವ ಟೀಸರ್ ಈಗಷ್ಟೇ ಹೊರ ಬಂದಿದೆ. ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಸಂಸ್ಥೆ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಟೀಸರ್ ಅನ್ನು ಸೋಷಲ್ ಮೀಡಿಯಾಕ್ಕೆ ಅಪ್‌ಲೋಡ್ ಮಾಡಿದೆ.

ವೀಕ್ಷಕರಿಂದ “ಟೀಸರ್‌ಗೆ” ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ವಿಕ್ರಮ್ ಯೋಗಾನಂದ್ ನಿರ್ದೇಶನದ ಈ ಚಿತ್ರಕ್ಕೆ ಐರಾ ಫಿಲಂಸ್ , ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಹಾಗೂ ಪಿಎಂ ಪ್ರೊಡಕ್ಷನ್ಸ್ ಸಂಸ್ಥೆಗಳು ಬಂಡವಾಳ ಹೂಡಿವೆ.
ಹಾಗೆಯೇ ಚಿತ್ರದ ಪ್ರಮೋಷನ್ಸ್ ಹಾಗೂ ಡಿಸ್ಟ್ರಿಬ್ಯೂಷನ್ ಹೊಣೆಯನ್ನು ಐರಾ ಸಂಸ್ಥೆ ವಹಿಸಿಕೊಂಡಿದೆ. ಇದು ಟ್ರಂಕ್ ಚಿತ್ರದ ಖ್ಯಾತಿಯ ನಿಹಾಲ್ ಹಾಗೂ ನಿರ್ದೇಶಕಿ ರಿಷಿಕಾ ಶರ್ಮಾ ನೇತೃತ್ವದ ಸಂಸ್ಥೆ.

‘ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಮುಖ್ಯ ಪಾತ್ರದಲ್ಲಿ, ಕೈಲಾಶ್ ಪಾಲ್, ಶೋಭರಾಜ್, ಸಂಜನಾ ಆನಂದ್ ಹಾಗೂ ಕಿರುತೆರೆಯ ಜನಪ್ರಿಯ ನಟ ಚಂದುಗೌಡ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಈಗಾಗಲೇ ಈ ಚಿತ್ರದ ಒಂದು ಡ್ಯುಟೆಯ್ ಸಾಂಗ್ ‘ಸಿಂಪಲ್ ಸುಲುಗೆ..’ಯ ಲಿರಿಕಲ್ ವಿಡಿಯೋ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗಿದೆ. ಅದು ಲಕ್ಷಾಂತರ ಪ್ರೇಕ್ಷಕರ  ಮನ ಗೆದ್ದಿದೆ, ಅಭಿಲಾಷ್ ಗುಪ್ತ  ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿ  ಹಾಡಿದ್ದಾರೆ.  ಕೇಳುಗರನ್ನು ಕ್ಷಣಾರ್ಧದಲ್ಲಿ ಆಕರ್ಷಿಸುವ ಹಾಗೆ ಇದು  ಸೊಗಾಸಾಗಿ ಮೂಡಿ ಬಂದಿದೆ.
‘ಹೀಗೊಂದು ದಿನ ’ ಚಿತ್ರದ ನಂತರ  ವಿಕ್ರಮ್ ಯೋಗಾನಂದ  ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಒಂದು ಉತ್ತಮ ಕತೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಹಾಡುಗಳು ಅದ್ಭುತವಾಗಿ ಬಂದಿವೆ. ಈಗಾಗಲೇ ಸಿಂಪಲ್ ಸಲುಗೆ..

ಹಾಡಿನ ಲಿರಿಕಲ್ ವಿಡಿಯೋಕ್ಕೆ ಸಿಕ್ಕ ಪ್ರತಿಕ್ರಿಯೆ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಸಿನಿಮಾ ಕೂಡ ಅಷ್ಟೇ ಮುದ್ದಾಗಿ ಬಂದಿದೆ. ಈಗ ಟೀಸರ್‌ಗೂ ಅಂತಹದೇ ರೆಸ್ಪಾನ್ಸ್ ಬರುತ್ತಿದೆ. ಚಿತ್ರವನ್ಮು ಪ್ರೇಕ್ಷಕರ ಮುಂದೆ ತರಲು ಖುಷಿ ಆಗುತ್ತಿದೆ. ನಿರ್ಮಾಪಕರ ಅಭಿಲಾಷೆಯಂತೆ ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಿದೆ. ಸದ್ಯಕ್ಕೆ ದಿನಾಂಕ ಫಿಕ್ಸ್ ಆಗಬೇಕಿದೆ’ ಎನ್ನುತ್ತಾರೆ ಚಿತ್ರ ತಂಡ.

ಇದನ್ನು ಪಬ್ಲಿಶ್ ಮಾಡಲು ಹಾಗೂ ನಮ್ಮ ಕುಷ್ಕ ಚಿತ್ರ ತಂಡಕ್ಕೆ ಪತ್ರಿಕಾ, ಟಿವಿ, ರೇಡಿಯೋ ಮತ್ತು ಆನ್ ಲೈನ್ ಮಾಧ್ಯಮಗಳಿಂದ ಸಹಕಾರ ಹಾಗೂ ಪ್ರೋತ್ಸಾಹ ಮುನ್ನೊಡುತ್ತಿದ್ದೇವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!