ನಾಡಿನೆಲ್ಲೆಡೆ ಹನುಮ ಜಯಂತಿಯ ಸಂಭ್ರಮ. ಈ ಶುಭದಿನದಂದು ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಟಿಸಿರುವ ಚಿತ್ರ “ಕುಲದಲ್ಲಿ ಕೀಳ್ಯಾವುದೋ” ಚಿತ್ರತಂಡಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿ ಸಿಹಿ ಸುದ್ದಿ ನೀಡಿದ್ದಾರೆ.
ಯೋಗರಾಜ್ ಭಟ್ ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್ ಬರೆದಿರುವ ಐದು ಹಾಡುಗಳು ಈ ಚಿತ್ರದಲ್ಲಿದ್ದು, ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲೇ ಆಡಿಯೋ ಹಕ್ಕನ್ನು ಒಳ್ಳೆಯ ಮೊತ್ತಕ್ಕೆ ಮನೋಮೂರ್ತಿ ಮ್ಯೂಸಿಕಲ್ ಕಂಪನಿ ಪಡೆದುಕೊಂಡಿದೆ. ಈ ಚಿತ್ರದ ಸಂಗೀತ ನಿರ್ದೇಶಕರು ಮನೋಮೂರ್ತಿ ಅವರೆ ಆಗಿರುವುದು ವಿಶೇಷ. ಹನುಮ ಜಯಂತಿಯ ದಿನವೇ ಅಂಜನಾದ್ರಿಗೆ ಭೇಟಿ ನೀಡಿರುವ ಚಿತ್ರತಂಡದ ಸದಸ್ಯರು ಅಂಜನಿಸುತ ಆಂಜನೇಯನ ದರ್ಶನ ಪಡೆದು ಆಡಿಯೋ ರೇಟ್ಸ್ ಸೋಲ್ಡ್ ಔಟ್ ಆಗಿರುವ ವಿಷಯ ವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
Be the first to comment