ಚಿತ್ರ: ಕುದ್ರು (Kudru)
ನಿರ್ದೇಶನ: ಭಾಸ್ಕರ್ ನಾಯ್ಕ್
ತಾರಾ ಬಳಗ: ಹರ್ಷಿತ್ ಶೆಟ್ಟಿ, ಫರ್ಹನ್, ಡೈನ ಡಿಸೋಜ ಇತರರು
ರೇಟಿಂಗ್: 3.5
ಆತ್ಮೀಯ ಗೆಳೆಯರ ನಡುವೆ ಮತೀಯ ಸಂದೇಶಗಳ ವಿನಿಮಯದ ಪರಿಣಾಮ ಏನಾಗುತ್ತದೆ ಎನ್ನುವ ಸಾಮಾಜಿಕ ಕಳಕಳಿಯ ಚಿತ್ರವಾಗಿ ಕುದ್ರು ಮೂಡಿ ಬಂದಿದೆ.
ಸೌಹಾರ್ದತೆಯಿಂದ ಬದುಕುವ ಗೆಳೆಯರ ನಡುವೆ ಮತೀಯ ಭಾವನೆಗಳನ್ನು ಕೆರಳಿಸುವ ಸಂದೇಶ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ನಿರ್ದೇಶಕರು ಚಿತ್ರದ ಮೂಲಕ ತೋರಿಸುವ ಯತ್ನವನ್ನು ಮಾಡಿದ್ದಾರೆ.
ಆಕಸ್ಮಿಕವಾಗಿ ಸೌದಿ ಅರೇಬಿಯಾದಲ್ಲಿ ಗೆಳೆಯ ಸತ್ತು ಹೋದಾಗ ಅದು ಆತನ ಸ್ನೇಹಿತ ಸದಾನಂದನ ಮೇಲೆ ಬಂದು ಅದು ಕೊಲೆ ಎಂದು ಪ್ರೋವ್ ಆಗುತ್ತದೆ. ಮತೀಯ ಭಾವನೆ ಇದ್ದ ಕಾರಣ ಕೊಲೆಯಾದ ವ್ಯಕ್ತಿಯ ಪತ್ನಿಗೆ ಕ್ಷಮಾದಾನ ಪತ್ರ ನೀಡಿ ಶಿಕ್ಷೆ ತಡೆಯುವ ಅವಕಾಶ ಇರುತ್ತದೆ. ಆದರೆ ಗೆಳೆಯನ ಪತ್ನಿ ಇದಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದ ಇಡೀ ಊರು ಬೂದಿ ಮುಚ್ಚಿದ ಕೆಂಡದಂತಾಗುತ್ತದೆ.
ಸದಾನಂದ ಆರೋಪದಿಂದ ಮುಕ್ತನಾಗಿ ಬಿಡುಗಡೆ ಹೊಂದುತ್ತಾನೆಯೇ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್. ಮುಂದೆ ಏನು ಆಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಾಗುತ್ತದೆ.
ಚಿತ್ರದಲ್ಲಿ ಕರಾವಳಿಯ ಸೊಗಸನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಪ್ರತೀಕ್ ಕುಂದು ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡು ಓಕೆ ಅನಿಸುತ್ತದೆ. ಶ್ರೀ ಪುರಾಣಿಕ್ ಅವರ ಕ್ಯಾಮರಾ ಕೆಲಸ ಚಿತ್ರದ ಹೈಲೈಟ್ ಆಗಿ ಮೂಡಿ ಬಂದಿದೆ.
____

Be the first to comment