ಫೆಬ್ರವರಿ 16ಕ್ಕೆ ‘ಕೆಟಿಎಂ’ ರಿಲೀಸ್

ದಿಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವ ದೀಕ್ಷಿತ್ ಶೆಟ್ಟಿ ಅಭಿನಯದ ‘ಕೆಟಿಎಂ’ ಚಿತ್ರ  ಫೆಬ್ರವರಿ 16ಕ್ಕೆ ತೆರೆಗೆ ಬರಲಿದೆ.

ರೊಮ್ಯಾಂಟಿಕ್ ಕಥೆ ಎಂದು ಬಿಂಬಿಸಲಾದ ಕೆಟಿಎಂ ಚಿತ್ರ ಟೀಸರ್ ಮೂಲಕ ಗಮನ ಸೆಳೆದಿದ್ದು, ಹಾಡುಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.

ಅಥರ್ವ ಚಿತ್ರವನ್ನು ನಿರ್ದೇಶಿಸಿದ್ದ ಅರುಣ್ ಕುಮಾರ್ ನಿರ್ದೇಶನದ ಕೆಟಿಎಂ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಲ್ಕು ವಿಭಿನ್ನ ಶೇಡ್ ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಕುಂದರ್,  ಸಂಜನಾ ದಾಸ್ ಚಿತ್ರದ ನಾಯಕಿಯರಾಗಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ಶನಿಲ್ ಗುರು, ಬಾಬು ಹಿರಣ್ಣಯ್ಯ, ದೇವ್ ದೇವಯ್ಯ, ಅಭಿಷೇಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಕ್ಷಯ್ ಸಹಯೋಗದಲ್ಲಿ ಮಹಾಸಿಂಹ ಮೂವೀಸ್ ಅಡಿಯಲ್ಲಿ ಆದಿ ವಿನಯ್ ಅವರು ಕೆಟಿಎಂ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾಗೆ ನವೀನ್ ಅವರ ಛಾಯಾಗ್ರಹಣ ಇದ್ದು, ಅರ್ಜುನ್ ಕಿಟ್ಟು ಸಂಕಲನವಿದೆ. ಚಿತ್ರವನ್ನು ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಚೇತನ್ ರಾವ್ ಸಂಗೀತ ಸಂಯೋಜನೆ ಮತ್ತು ಅರಸು ಅಂಥಾರೆ ಬರೆದಿರುವ ಸೋಜಿಗ ಹಾಡಿಗೆ ಸಂಜಿತ್ ಹೆಗಡೆ ಅವರ ಗಾಯನವಿದೆ. ಅಯ್ಯಯ್ಯೋ ಎಂಬ ಮತ್ತೊಂದು ಹಾಡನ್ನು ಆಂಟೋನಿ ದಾಸ್ ಅವರು ಹಾಡಿದ್ದು ಅವರಿಗೆ ಆರವ್ ಜೋಶಿ ಮತ್ತು ಚೇತನ್ ರಾವ್ ಸಾಥ್ ನೀಡಿದ್ದಾರೆ.

ದಿಯಾ ನಂತರ ಇತರ ಭಾಷೆಗಳಲ್ಲೂ ಅಭಿನಯಿಸಿರುವ ದೀಕ್ಷಿತ್ ಶೆಟ್ಟಿ ಅವರು ಖ್ಯಾತ ತೆಲುಗು ನಟ ನಾನಿ ಅವರ ದಸರಾದಲ್ಲೂ ಅಭಿನಯಿಸಿದ್ದಾರೆ.  ಅವರ ಮುಂದಿನ ಚಿತ್ರ ದಿ ಗರ್ಲ್ಫ್ರೆಂಡ್ ಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಪರದೆ ಹಂಚಿಕೊಂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!