ಹಸೆಮಣೆ ಏರಲಿದ್ದಾರೆ ನಟಿ ಕೃತಿ ಕರಬಂಧ

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿನಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಾಮ್ರಾಟ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ಹಿಂದೂ ಸಂಪ್ರದಾಯದಂತೆ ಕೃತಿ ಹಾಗೂ ಪುಲ್ಕಿತ್ ಹಸೆಮಣೆ ಏರುತ್ತಿದ್ದಾರೆ.  ಯುರೋಪ್​ನ ವಾಸ್ತುಶಿಲ್ಪದಲ್ಲಿ 300 ಎಕರೆ ಜಾಗದಲ್ಲಿರುವ ಈ ಹೋಟೆಲ್  ನಿರ್ಮಾಣ ಮಾಡಲಾಗಿದೆ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್​ನಲ್ಲಿ 4 ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್​ಗಳು,  ಗಾಲ್ಫ್ ಮೈದಾನ, ಸ್ಪಾ ಮೊದಲಾದ ಸೇವೆಗಳು ಲಭ್ಯವಿದೆ.

ಕೃತಿ ಹಾಗೂ ಪುಲ್ಕಿತ್ ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಈ ಕಾರಣಕ್ಕೆ ದೆಹಲಿಯಲ್ಲೇ ಮದುವೆ ಆಗಬೇಕು ಎಂದು ಅವರು ನಿರ್ಧರಿಸಿದ್ದಾರೆ. ಇದೇ ಹೋಟೆಲ್​ನಲ್ಲಿ ಮದುವೆಗೂ ಪೂರ್ವದ ಕಾರ್ಯಗಳಾದ ಸಂಗೀತ್, ಮೆಹಂದಿ ಕಾರ್ಯಕ್ರಮಗಳು ಕೂಡ ನಡೆಯಲಿವೆ.

‘ಪಾಗಲ್​ಪಂತಿ’ ಸಿನಿಮಾದಲ್ಲಿ ಭೇಟಿ ಆದ ಪುಲ್ಕಿತ್ ಹಾಗೂ ಕೃತಿ ಈ ವರ್ಷದ ಆರಂಭದಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು. ಸದ್ಯದಲ್ಲೇ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!