ಸಿನಿ ಪ್ರಿಯರ ಮನ ಮುಟ್ಟುವಂತೆ ಮತ್ತೊಂದು ವಿಭಿನ್ನ ಪ್ರಯತ್ನದ ಹಾಸ್ಯಭರಿತ ಸಂದೇಶ ಇರುವ ಚಿತ್ರ “ಕ್ರಿಟಿಕಲ್ ಕೀರ್ತನೆಗಳು” ತೆರೆಗೆ ಬರಲು ಸನ್ನದ್ಧವಾಗಿದೆ. ಕೇಸರಿ ಫಿಲಂ ಕ್ಯಾಪ್ಚರ್, ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
“ಕ್ರಿಟಿಕಲ್ ಕೀರ್ತನೆಗಳು” ಚಿತ್ರ ಸೆನ್ಸಾರ್ ನಿಂದ ಯು/ಎ ಸರ್ಟಿಪಿಕೆಟ್ ಪಡೆದಿದ್ದು , ತೆರೆಮೇಲೆ ನನ್ನ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ಚಿತ್ರಕ್ಕೆ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ. ಇವರು ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.
ಇದು ಇವರ ಎರಡನೇ ಪ್ರಯತ್ನ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರಕ್ಕೆ ಛಾಯಾಗ್ರಹಣ ಶಿವಸೇನ ಮತ್ತು ಶಿವಶಂಕರ್, ಸಂಗೀತ ವೀರ್ ಸಮರ್ಥ್ ಮಾಡಿದ್ದಾರೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾಂನಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರವು ನೈಜ ಘಟನೆ ಆಧಾರಿತ ಐಪಿಎಲ್ ಬೆಟ್ಟಿಂಗ್‍ನ ವಿಷಯವನ್ನು ಸಂಪೂರ್ಣ ಹಾಸ್ಯಮಯ ಚಿತ್ರವಾಗಿ ತೆರೆಯ ಮೇಲೆ ತರಲಿದ್ದಾರೆ.
ಇನ್ನೂ ಪಾತ್ರವರ್ಗದಲ್ಲಿ ತಬಲಾ ನಾಣಿ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣ ಬಾಲ್ ರಾಜ್, ಧರ್ಮ ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಮುಂತಾದವರಿದ್ದಾರೆ. ಅದ್ದೂರಿ ಪ್ರಚಾರದ ಮೂಲಕ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Be the first to comment