ಕೃತಿ ಶೆಟ್ಟಿ

ಬಾಲಿವುಡ್​ಗೆ ಪದಾರ್ಪಣೆ ಮಾಡಲಿರುವ ಕರ್ನಾಟಕದ ನಟಿ

ಮಂಗಳೂರು ಮೂಲದ ಕೃತಿ ಶೆಟ್ಟಿ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ. ವರುಣ್ ಧವನ್ ನಟನೆಯ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ.

ವರುಣ್ ಧವನ್​ರ ಹೊಸ ಸಿನಿಮಾವನ್ನು ಅವರ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದಾರೆ. ಕೃತಿ ಶೆಟ್ಟಿ ಬಾಲಿವುಡ್​ಗೆ ಪದಾರ್ಪಣೆ ಮಾಡುವ ಸುದ್ದಿ ಹೊರಬೀಳುತ್ತಿದ್ದಂತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಮೂಲಗಳ ಪ್ರಕಾರ ಕೃತಿ ಹಾಗೂ ವರುಣ್ ಧವನ್​ರ ಹೊಸ ಸಿನಿಮಾದ ಮುಹೂರ್ತ ಶೀಘ್ರವೇ ನಡೆಯಲಿದೆ.

ಕೃತಿ ಶೆಟ್ಟಿನಾಯಕಿಯಾಗಿ ಪರಿಚಯವಾಗಿದ್ದು ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ. 2021 ರಲ್ಲಿ ಬಿಡುಗಡೆ ಆದ ‘ಉಪ್ಪೆನ’ ಸಿನಿಮಾ ಕೋವಿಡ್ ನಿಯಮಗಳ ನಡುವೆ  ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಕೃತಿಯ ಅಂದದ ಜೊತೆಗೆ ಆಕೆಯ ನಟನೆಗೂ  ಪ್ರಶಂಸೆ ವ್ಯಕ್ತವಾಗಿತ್ತು.

ಬಳಿಕ ಕೃತಿ, ನ್ಯಾಚುರಲ್ ಸ್ಟಾರ್ ನಾನಿ, ನಾಗ ಚೈತನ್ಯ, ನಿತಿನ್, ರಾಮ್ ಪೋತಿನೇನಿ ಇನ್ನೂ ಕೆಲವು ಸ್ಟಾರ್ ನಟರೊಡನೆ ಸಿನಿಮಾಗಳನ್ನು ಮಾಡಿದರು.  ಕೃತಿ ಕೈಯಲ್ಲಿ ಒಂದು ಮಲಯಾಳಂ ಹಾಗೂ ಮೂರು ತಮಿಳು ಸಿನಿಮಾಗಳಿವೆ. ಇದರ ನಡುವೆ ಕೃತಿ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಕೃತಿ ಶೆಟ್ಟಿ ಕನ್ನಡದ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲವಾದರೂ, ಕರ್ನಾಟಕ ಮೂಲದ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಸನದಲ್ಲಿ ಜನಿಸಿದ ಕೃತಿ ಶೆಟ್ಟಿ ಬೆಳೆದಿದ್ದು ಬಹುತೇಕ ಮುಂಬೈನಲ್ಲಿ. ತಂದೆ ಮುಂಬೈನಲ್ಲಿ ಉದ್ಯಮಿ, ತಾಯಿ ಫ್ಯಾಷನ್ ಡಿಸೈನರ್. ಎಳವೆಯಿಂದ  ನೃತ್ಯ, ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಕೃತಿ ಶೆಟ್ಟಿ, ಕಾಲೇಜು ಮೆಟ್ಟಿಲು ಹತ್ತುವ ಸಮಯದಲ್ಲಿ  ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಹೃತಿಕ್ ರೋಷನ್ ನಟಿಸಿದ್ದ ‘ಸೂಪರ್ 30’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!