ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಇಂದು ಬಿಡುಗಡೆಯಾಗಿದೆ.
ನಿನ್ನೆ ರಾತ್ರಿ ಪ್ರೀಮಿಯರ್ ಆಯೋಜಿಸಿದ್ದು, ಸ್ಯಾಂಡಲ್ವುಡ್ ನಟ ಹಾಗೂ ನಟಿಯರು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಡಿ ಬಂದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ 8 ನಾಯಕಿಯರ ಜೊತೆಗೆ ಆಕ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಫ್ಯಾಮಿಲಿ ಡ್ರಾಮಾ ಜೊತೆಗೆ ಒಂದಷ್ಟು ವಿಶೇಷ ಕಂಟೆಂಟ್ ಕೂಡ ಇದೆ.
ತನ್ನ ಹಾಡುಗಳಿಂದಲೇ ಸಿನಿಮಾ ತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ಈ ಮೂಲಕ ಗೋಲ್ಡನ್ ಸ್ಟಾರ್ ನಟನೆಯ ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆಯ ಸುರಿಮಳೆ ಕಂಡು ಬಂದಿತ್ತು.
ಚಿತ್ರದಲ್ಲಿ ಗಣೇಶ್ ಜೊತೆಗೆ ಮಾಳವಿಕ ನಾಯರ್, ಶರಣ್ಯ ಶೆಟ್ಟಿ, ಶಶಿ ಕುಮಾರ್, ಗಿರೀಶ್ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್ ಮುಂತಾದವರು ನಟಿಸಿದ್ದಾರೆ.
____

Be the first to comment