ಅಜೇಯ್ ರಾವ್ ನಾಯಕನಾಗಿ ನಟಿಸಿರುವ ಕೃಷ್ಣ ಟಾಕೀಸ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಸರ್ಕಾರ ಸಿನಿಮಾ ಮಂದಿರಗಳ ಆರಂಭಕ್ಕೆ ಬಿಡುಗಡೆ ನೀಡಿದ ಕೂಡಲೆ ಕೃಷ್ಣ ಟಾಕೀಸ್ ನಿಮ್ಮ ನೆಚ್ಚಿನ ಟಾಕೀಸ್ ಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರ ವೀಕ್ಷಿಸಲು ಸೆನ್ಸಾರ್ ಮಂಡಳಿಗೆ ಅನುಮತಿ ಕೋರಿ ಮೂರು ತಿಂಗಳು ಕಳೆದಿತ್ತು. ಕಾಕತಾಳೀಯ ಎಂಬಂತೆ ಭಗವಾನ್ ಶ್ರೀ ಕೃಷ್ಣ ಅವತರಿಸಿದ ಪರಮ ಮಂಗಳಕರ ದಿವಸ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದೆ ನಮ್ಮ ಚಿತ್ರದ ಸೆನ್ಸಾರ್ ಆಗಿದ್ದು ಸಂತಸ ತಂದಿದೆ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್.
ಗೋಕುಲ್ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದ ರಾಜು ಎ.ಹೆಚ್ ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದ್ದು, ಚಿತ್ರರಸಿಕರಿಂದ ಮೆಚ್ಚುಗೆ ಪಡೆದಿದೆ.
ವಿಜಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮದ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಕೃಷ್ಣ ಟಾಕೀಸ್ ಗಿದೆ. ಲವರ್ ಬಾಯ್ ಪಾತ್ರದಲ್ಲಿ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಜೇಯ್ ರಾವ್ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದಲ್ಲಿ ಅಭಿನಯಿಸಿದ್ದಾರೆ.
ಅಪೂರ್ವ, ಸಿಂಧು ಲೋಕನಾಥ್, ಚಿಕ್ಕಣ್ಣ, ಮಂಡ್ಯ ರಮೇಶ್, ಶೋಭ್ ರಾಜ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ…
Be the first to comment