KRG Studios : ವಿತರಣೆಯಲ್ಲಿ ಹೊಸ ಸಾಧನೆ ಬರೆದ ಕೆ ಆರ್ ಜಿ ಸ್ಟುಡಿಯೋಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನದಾರಿಯಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ ಆರ್ ಜಿ ಸ್ಟುಡಿಯೋಸ್ ಹೊಸ ಸಾಧನೆ ಬರೆದಿದೆ. ಈ ಚಿತ್ರ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನೇತೃತ್ವದ ಕೆ ಆರ್ ಜಿ ಸ್ಟುಡಿಯೋಸ್ ವಿತರಣೆಯ ನೂರನೇ ಚಿತ್ರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ವಿತರಣೆಯ ಕೆಲಸದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಈ ನಡುವೆ ಕೆ ಆರ್ ಜಿ ಸ್ಟುಡಿಯೋಸ್ ಕಳೆದ ಆರು ವರ್ಷದಲ್ಲಿ ನೂರು ಚಿತ್ರಗಳನ್ನು ವಿತರಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಕಾರ್ತಿಕ್ ಗೌಡ ಹಾಗೂ ಯೋಗಿರಾಜ್ ಅವರು ಹೊಂಬಾಳೆ ಫಿಲಂಸ್ ಇಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. 2017ರಲ್ಲಿ ಇವರು ಕೆ ಆರ್ ಜಿ ಸ್ಟುಡಿಯೋಸ್ ಆರಂಭ ಮಾಡಿದರು. ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಈ ಸಂಸ್ಥೆಯ ಮೊದಲ ವಿತರಣೆಯ ಚಿತ್ರವಾಗಿತ್ತು.

ಕೆ ಆರ್ ಜಿ ಸ್ಟುಡಿಯೋಸ್ ಕನ್ನಡ ಅಲ್ಲದೆ ಇತರ ಭಾಷೆಯ ಚಿತ್ರಗಳನ್ನು ಕೂಡ ವಿತರಣೆ ಮಾಡುತ್ತಾ ಬಂದಿದೆ. ಕಾರ್ತಿಕ್ ಹಾಗೂ ಯೋಗಿ ಅವರು ರತ್ನನ್ ಪ್ರಪಂಚ ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಇದುವರೆಗೆ ಪೈಲ್ವಾನ್, ಕೆಜಿಎಫ್ ಒಂದು ಹಾಗೂ ಎರಡು, ಕಾಂತಾರಾ, 777 ಚಾರ್ಲಿ, ಬಡವ ರಾಸ್ಕಲ್, ಜೈಲರ್, ಆದಿಪುರುಷ, ತಾರಕ್ ಮೊದಲಾದ ಚಿತ್ರಗಳನ್ನು ವಿತರಣೆ ಮಾಡಿದೆ.

ಜಯಣ್ಣ ಫಿಲಂಸ್ ನ ಜಯಣ್ಣ ಹಾಗೂ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರ ಬೆಂಬಲ ಇಲ್ಲದಿದ್ದಲ್ಲಿ ವಿತರಣೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಆಗುತ್ತಿರಲಿಲ್ಲ. ಕೋವಿಡ್ ಇತರ ಕಾರಣಗಳಿಂದಾಗಿ ಮೊದಲ ನಾಲ್ಕು ವರ್ಷದಲ್ಲಿ ಕೇವಲ 50 ಚಿತ್ರಗಳನ್ನು ನಾವು ವಿತರಣೆ ಮಾಡಿದ್ದೇವೆ. ಕಳೆದ ಎರಡು ವರ್ಷದಲ್ಲಿ 50 ಚಿತ್ರಗಳನ್ನು ವಿತರಣೆ ಮಾಡುವಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಯೋಗಿ ಜಿ ರಾಜ್ ಅವರು ಹೇಳಿದ್ದಾರೆ.

ನೂರು ಚಿತ್ರಗಳನ್ನು ವಿತರಣೆ ಮಾಡಿರುವ ಸಂತೋಷದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಬಾನ ದಾರಿಯಲ್ಲಿ ಚಿತ್ರದ 500 ಟಿಕೆಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲು ಮುಂದಾಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!