Kranthiveera :“ಕ್ರಾಂತಿವೀರ ಓ ದೇಶ ಪ್ರೇಮವಾ ಹಾಡು ಬಿಡುಗಡೆ ; ಅ.25ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಕಿರಿಯ ವಯಸಿನ ಕ್ರಾಂತಿಕಾರಿ ಮತ್ತು ಸ್ವಾತಂತ್ರ ಹೋರಾಟಗಾರ ಎನಿಸಿಕೊಂಡ ಭಗತ್‍ಸಿಂಗ್ ಅವರ ಜೀವನಚರಿತ್ರೆ ಕುರಿತಾದ ಚಲನಚಿತ್ರ “ಕ್ರಾಂತಿವೀರ” ಚಿತ್ರ ಅಗಸ್ಟ್ 18ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಓ ದೇಶ ಪ್ರೇಮವ’ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತದೆ.

ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಈ ಯುವ ಕ್ರಾಂತಿಕಾರಿಯ ಬಯೋಪಿಕ್ ಬೆಳ್ಳಿತೆರೆ ಮೇಲೆ ಬರುತ್ತಿದೆ. ಯುವ ನಟ ಅಜಿತ್ ಜಯರಾಜ್ ಈ ಚಿತ್ರದಲ್ಲಿ ಕ್ರಾಂತಿವೀರ ಭಗತ್‍ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಥ ಮಹಾನ್ ವ್ಯಕ್ತಿಯ ಚಿತ್ರವನ್ನು ಯುವ ನಿರ್ದೇಶಕ ಆದತ್ ಸಾರಥ್ಯದಲ್ಲಿ ಸಿದ್ಧವಾಗಿದೆ.

ಒಂದಷ್ಟು ಕಿರುಚಿತ್ರಗಳು ಹಾಗೂ ಚಲನಚಿತ್ರ ನಿರ್ದೇಶನ ಮಾಡುವ ಮೂಲಕ ಗುರುತಿಸಿಕೊಂಡಿರುವ ಆದತ್ ಇದೇ ಮೊದಲಬಾರಿಗೆ ಒಬ್ಬ ಯುವ ದೇಶಭಕ್ತನ ಬಯೋಪಿಕ್ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಸದ್ಯ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಲ್ಲದೆ ಕೆಜಿಎಫ್, ಹುಬ್ಬಳ್ಳಿ , ಬಾಗಲಕೋಟೆ, ಶಿವಮೊಗ್ಗ ಜೈಲ್ ಅಲ್ಲದೆ ಜಲಿಯನ್ ವಾಲಾಬಾಗ್‍ನ ಸೆಟ್ ಹೀಗೆ ಮುಂತಾದೆಡೆಗಳಲ್ಲಿ 63 ದಿನಗಳ ಚಿತ್ರೀಕರಣ ನಡೆಸಲಾಗಿದೆ.
1907ರಲ್ಲಿ ಜರನವಾಲಾ ತಾಲ್ಲೂಕಿನ ಬಂಗಾ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಭಗತ್‍ಸಿಂಗ್ ಬದುಕಿದ್ದು ಕೇವಲ 24 ವರ್ಷ.

ಕಿರಿ ವಯಸ್ಸಿನಲ್ಲಿಯೇ ಭಗತ್‍ಸಿಂಗ್‍ ರಲ್ಲಿ ಹೋರಾಟದ ಕಿಚ್ಚು ಹಚ್ಚಿದವರೆಂದರೆ ಆತನ ಚಿಕ್ಕಪ್ಪ ಅಜಿತ್‍ಸಿಂಗ್. ಈ ಯುವ ಹೋರಾಟಗಾರರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು.
ಈ ಚಿತ್ರದಲ್ಲಿ 9 ಹಾಡುಗಳಿದ್ದು, ಪ್ರತಾಪ್ ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಚಂದ್ರಶೇಖರ ಆಜಾದ್‍ರ ಪಾತ್ರದಲ್ಲೂ, ಸಾಹಿತಿ ವಿ.ನಾಗೇಂದ್ರಪ್ರಸಾದ್ ಅವರು ಲಾಲಾ ಲಜಪತ್‍ರಾಯ್ ಆಗಿಯೂ ಬಣ್ಣ ಹಚ್ಚಿದ್ದಾರೆ. ನಟಿ ಭವಾನಿ ಪ್ರಕಾಶ್ ಭಗತ್‍ಸಿಂಗ್‍ರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಜೋಸೈಮನ್ ತಂದೆಯ ಪಾತ್ರ ನಿರ್ವಹಿಸಿದ್ದಾರೆ.

ಹಿರಿಯ ನಟ ಧರ್ಮ ಜೈಲರ್ ಪಾತ್ರ ಮಾಡಿದ್ದಾರೆ. ಜೊತೆಗೆ ಲಕ್ಷ್ಮಣ ಎಂಬ ಹೊಸ ಪ್ರತಿಭೆ ಕೂಡ ನಟಿಸಿದ್ದಾರೆ. ಆದತ್ ಅವರ ಈ ಸಾಹಸಕ್ಕೆ ಚಂದ್ರಕಲಾ ಟಿ.ರಾಥೋಡ್, ಮಂಜುನಾಥ ನಾಯಕ್ ಹಾಗೂ ಆರ್ಜೂರಾಜ್ ನಿರ್ಮಾಪಕರಾಗಿ ಬೆನ್ನಹಿಂದೆ ನಿಂತಿದ್ದಾರೆ.

ಜೊತೆಗೆ ತ್ರಿವಿಕ್ರಮ ಸಾಫಲ್ಯ , ಪ್ರಶಾಂತ್ ಕಲ್ಲೂರ ಕೂಡ ಕೈಜೋಡಿಸಿದ್ದಾರೆ. ಹೀರಾಲಾಲ್ ಮೂವೀಸ್ ಹಾಗೂ ಎಬಿ ನೆಟ್‍ವರ್ಕ್, ಧೃತಿ ಕ್ರಿಯೇಶನ್ಸ್, ಕಲ್ಲೂರ ಸಿನಿಮಾಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತ ಇನ್ನು ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ತಂಡ ಸದ್ಯದಲ್ಲೇ ನೀಡದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!