ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಆಗಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್ ಆಲ್ಬಮ್ ಗಳು ಸೂಪರ್ ಹಿಟ್ ಆಗಿದೆ. ಸಹಜವಾಗಿಯೇ ‘ಕ್ರಾಂತಿ’ ಸಾಂಗ್ಸ್ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.
10ನೇ ತಾರೀಖು ನಾವು ಮೈಸೂರಿಗೆ ಬರ್ತೀವಿ. ನಮ್ಮ ಇಡೀ ಚಿತ್ರತಂಡ ಜೊತೆಗೆ ಇರುತ್ತದೆ. ಆದರೆ ಒಂದು ವಿಶೇಷ ಏನಂದರೆ ನಾನು ಅಂದು ನಾಯಕ ನಟನಾಗಿ ನಿಮ್ಮ ಮುಂದೆ ಬರುವುದಿಲ್ಲ. ಒಬ್ಬ ನಿರೂಪಕನಾಗಿ ಬರ್ತೀನಿ. ನೀವು ಬನ್ನಿ ನಿಮ್ಮ ‘ಕ್ರಾಂತಿ’ ಚಿತ್ರದ ಮೊದಲ ಹಾಡನ್ನು ನೀವೇ ಬಿಡುಗಡೆ ಮಾಡಿ” ಎಂದು ದರ್ಶನ್ ಮನವಿ ಮಾಡಿದ್ದಾರೆ.
ಧರಣಿ ಒಂದು ಥೀಮ್ ಸಾಂಗ್ ಎಂದು ಬಿಂಬಿಸಲಾಗಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ಬರೆದಿದ್ದಾರೆ.
“ಧರಣಿಯು ಬಹಳಷ್ಟು ಭಾವನೆಗಳನ್ನು ಸೆಳೆಯುತ್ತದೆ, ಮತ್ತು ಇದು ಕನ್ನಡದ ಕೆಲವು ಹಾಡುಗಳಲ್ಲಿ ಒಂದಾಗಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಕನ್ನಡ ಮಾತನಾಡುವ ಜನರ ಹೃದಯದಲ್ಲಿ ಉಳಿಯುತ್ತದೆ ಎಂದು 8 ಗಾಯಕರನ್ನು ಒಟ್ಟುಗೂಡಿಸಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹೇಳಿದ್ದಾರೆ.
ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಮಧ್ವೇಶ್ ಬಾರದ್ವಾಜ್, ವಿಹಾನ್, ಖುಸಾಲ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಮತ್ತು ಪ್ರಾರ್ಥನಾ ಹಾಡಿಗೆ ದನಿಗೂಡಿಸಿದ್ದಾರೆ.
ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಿಸಿರುವ ಕ್ರಾಂತಿ ಚಿತ್ರದಲ್ಲಿ ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ, ಸಂಯುಕ್ತ ಹೊರ್ನಾಡ್ ಮತ್ತು ವೈನಿಧಿ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣ, ಶಶಿಧರ್ ಅಡಪ ಕಲಾಸೆಟ್ ನಿರ್ಮಿಸಿದ್ದಾರೆ.
__

Be the first to comment