ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆ ಆಗಲಿದೆ.
ದರ್ಶನ್ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ.
ದರ್ಶನ್ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು, ರಾಬರ್ಟ್ ಬಳಿಕ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿದೆ.
ದರ್ಶನ್ ಅವರು ಸಿನಿಮಾದ ಕಥಾವಸ್ತುವಿನೊಂದಿಗೆ ರಾಜಿಯಾಗದೇ ಮಾಸ್ ವೀಕ್ಷಕರನ್ನು ರಂಜಿಸುವುದೇ ತಮ್ಮ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ.
ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನಡಿಯಲ್ಲಿ ಶೈಲಜಾ ನಾಗ್ ಕ್ರಾಂತಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಿ ಸುರೇಶ ಸಹ ನಿರ್ಮಾಪಕರಾಗಿದ್ದಾರೆ.
ಗಣರಾಜ್ಯೋತ್ಸವ ದಿನದಂದೇ ಚಿತ್ರ ಬಿಡುಗಡೆಗೆ ಸೂಕ್ತ ದಿನ ಎಂಬ ನಿರ್ಧಾರಕ್ಕೆ ಬರಲಾಗಿದೆ. ಯಜಮಾನ ಸಿನಿಮಾ ಬಳಿಕ ಚಿತ್ರ ತಂಡ ದರ್ಶನ್ ಜೊತೆಗೆ ಎರಡನೇ ಬಾರಿಗೆ ಜೊತೆಗೂಡಿದೆ.
ನಿರ್ದೇಶಕ ವಿ ಹರಿಕೃಷ್ಣ ಅವರ ಕ್ರಾಂತಿ ಸಿನಿಮಾ ಸರ್ಕಾರಿ ಶಾಲೆಗಳ ಸುತ್ತ ಹೆಣೆಯಲಾಗಿರುವ ಕಥಾವಸ್ತು ಹೊಂದಿದೆ.
ಅಕ್ಷರ ಕ್ರಾಂತಿ ಸಿನಿಮಾದ ಸಂದೇಶವಾಗಿರಲಿದೆ ಎಂದು ದರ್ಶನ್ ಹೇಳಿದ್ದಾರೆ.
____

Be the first to comment