‘ಕೋಟಿಗೊಬ್ಬ 3’ ಟೀಸರ್ ವಿವಾದ

ಕೋಟಿಗೊಬ್ಬ 3 ಚಿತ್ರದ ಮಾಧ್ಯಮಗೋಷ್ಠಿ ಎರಡು ಬಾರಿ ನಡೆದಿದ್ದು ಕೂಡ ವಿವಾದದ ಬಗ್ಗೆ ಹೇಳಿಕೊಳ್ಳಲು! ಈ ಬಾರಿಯೂ ನಿರ್ಮಾಪಕ ಸೂರಪ್ಪ ಬಾಬು ಒಬ್ಬರೇ ಬಂದು ತಮ್ಮ ಸಿನಿಮಾದ ಟೀಸರ್ ಯಾಕೆ ಡಿಲಿಟ್ ಆಯಿತು ಎನ್ನುವ ಬಗ್ಗೆ ಮಾತನಾಡಿದರು.

” ಸಿನಿಮಾದ ಟೀಸರ್ ಬಿಡುಗಡೆಯಾದಾಗ ಒಳ್ಳೆಯ ಪ್ರತಿಕ್ರಿಯೆ ಲಭಿಸಿತ್ತು. ಆದರೆ ಈ ಮಧ್ಯೆ ಟೀಸರ್ ಡಿಲೀಟ್ ಆದಾಗ ಅಭಿಮಾನಿಗಳಿಗೆ ದಿಗಿಲಾಯಿತು” ಎಂದು ಮಾತು ಶುರು ಮಾಡಿದ ಬಾಬು, ವಿದೇಶದಲ್ಲಿ ಶೂಟಿಂಗ್ ಸಹಕಾರಕ್ಕಾಗಿ ಜತೆಗಿದ್ದ ಸಂಜಯ್ ಪಾಲ್ ಎನ್ನುವ ವ್ಯಕ್ತಿ ಮಾಡಿರುವ ಕಿತಾಪತಿ ಇದು ಆರೋಪಿಸಿದರು.

ಅವರು ವಿದೇಶದಲ್ಲಿ ನಮಗದ ಸರಿಯಾಗಿ ಸಹಕರಿಸಿರಲಿಲ್ಲ. ಮತ್ತು ಬೇಡಿಕೆಗಳನ್ನು ಪೂರೈಸಿಲ್ಲ.‌ ಹಾಗಾಗಿ ನಾವು ಕೂಡ ಅವರು ಮಾಡಿದ ಕೆಲಸಕ್ಕೆ ಮಾತ್ರ ಪೇಮೆಂಟ್ ಕೊಟ್ಟೆವು. ಜಾಸ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ನಾವು ಅವರ ಬೇಡಿಕೆಯನ್ನು ಒಪ್ಪದೇ ವಾಪಾಸಾಗಿದ್ದೇವೆ. ಅದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಟೀಸರ್ ನ್ನು ರಿಪೋರ್ಟ್ ಮಾಡಿ, ಯೂ ಟ್ಯೂಬ್ ನಿಂದ ಡಿಲೀಟ್ ಮಾಡಿಸಿದ್ದಾರೆ. ಅವರಿಗೆ ಸಿನಿಮಾ ಟೀಸರ್ ಮೇಲೆ ಯಾವುದೇ ಹಕ್ಕಿಲ್ಲ ಎನ್ನುವುದನ್ನು ಪ್ರೂವ್ ಮಾಡುತ್ತೇವೆ. ಮತ್ತು ಆದಷ್ಟು ಬೇಗ ಟೀಸರ್ ಮತ್ತೆ ಕಾಣಿಸಿಕೊಳ್ಳಲಿದೆ ಎಂದರು.

ಸಿನಿಮಾ‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸುದೀಪ್ ಅವರ ಸಹಕಾರ ತುಂಬಾ ಚೆನ್ನಾಗಿತ್ತು. ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಿನಿಮಾ ತಂಡದೊಂದಿಗೆ ಮಾಧ್ಯಮದ ಮುಂದೆ ಬರೋದಾಗಿ ನಿರ್ಮಾಪಕ‌ ಸೂರಪ್ಪ ಬಾಬು ಭರವಸೆ ನೀಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!