ಕೋಟಿಗೊಬ್ಬ 3 ರಿಲೀಸ್ ಡೇಟ್ ಶೀಘ್ರ ಘೋಷಣೆ

ಕೋಟಿಗೊಬ್ಬ 3 ಚಿತ್ರದ ರಿಲೀಸ್​ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ ಎಂದು ನಟ ಸುದೀಪ್ ಹೇಳಿದ್ದಾರೆ.

ಕೋಟಿಗೊಬ್ಬ 3 ಸಿನಿಮಾ ರಿಲೀಸ್​ಗೆ ಸಜ್ಜಾಗುತ್ತಿದೆ. ಸುದೀಪ್ ಬಿಟ್ಟು ಉಳಿದ ಎಲ್ಲರೂ ಡಬ್ಬಿಂಗ್ ಮುಗಿಸಿದ್ದಾರೆ.
“ಈಗ ನಾನು ಕಂಠದಾನ ಮಾಡಲಾರಂಭಿಸಿದ್ದು, ಶೀಘ್ರ ಅದನ್ನು ಮುಗಿಸಲಾಗುವುದು” ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.
“ಮತ್ತೊಮ್ಮೆ ಮೈಕ್ ಮುಂದೆ ಬಂದಿದ್ದೇನೆ. ಕೋಟಿಗೊಬ್ಬ 3 ಚಿತ್ರದ ವಾಯ್ಸ್​ ಓವರ್​ ನಡೆಯುತ್ತಿದೆ. ತುಂಬಾ ಸಮಯದ ನಂತರ ಸತ್ಯ ಹಾಗೂ ಶಿವನಾಗಿ ಕಾಣಿಸಿಕೊಂಡಿದ್ದು ಇದೊಂದು ರೀತಿ ಫನ್​ ಎನಿಸುತ್ತಿದೆ. ಎಲ್ಲರೂ ಕಂಠದಾನ ಮಾಡಿದ್ದಾರೆ. ನಾನು ಡಬ್ಬಿಂಗ್​ ಮಾಡುತ್ತಿದ್ದೇನೆ. ಬೇಗನೇ ಸಿನಿಮಾ ಕೆಲಸಗಳನ್ನು ಮುಗಿಸಿ ರಿಲೀಸ್​ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ ” ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪ್​ ಸತ್ಯ ಹಾಗೂ ಶಿವನಾಗಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಿವಕಾರ್ತಿಕ್​ ನಿರ್ದೇಶನದ ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್ ಅವರು ನಾಯಕಿಯಾಗಿ ನಟಿಸಿದ್ದಾರೆ.

ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಆಗಿದ್ದು ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.
___________

Be the first to comment

Leave a Reply

Your email address will not be published. Required fields are marked *

Translate »
error: Content is protected !!