ಕೊತ್ತಲವಾಡಿ

Movie Review: ಮರಳುಗಾರಿಕೆಗೆ ವಿರುದ್ಧ ಕೆರಳಿ‌ ನಿಂತವರ ಚಿತ್ರ

ಚಿತ್ರ: ಕೊತ್ತಲವಾಡಿ
ನಿರ್ದೇಶನ: ಶ್ರೀರಾಜ್
ನಿರ್ಮಾಣ: ಪುಷ್ಪ ಅರುಣ್ ಕುಮಾರ್
ತಾರಾಗಣ: ಪೃಥ್ವಿ ಅಂಬರ್, ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು

ಡಾ.ರಾಜ್ ಕುಮಾರ್ ನಟನೆಯ ಪ್ರತಿಯೊಂದು‌ ಚಿತ್ರದಲ್ಲೂ ಏನಾದರೊಂದು ಸಂದೇಶ ಇದ್ದೇ ಇರುತ್ತಿತ್ತು. ಅಣ್ಣಾವ್ರ ಅಪ್ಪಟ ಅಭಿಮಾನಿಯಾದ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಕೂಡ ಮೊದಲ‌ ನಿರ್ಮಾಣದಲ್ಲೇ ಸಂದೇಶಾತ್ಮಕ ಚಿತ್ರ ನಿರ್ಮಿಸಿದ್ದಾರೆ. ಮರಳುಗಾರಿಕೆ ಹೇಗೆ ಒಂದು ಊರಿನ‌ ಕೊರಳು ಕೊಯ್ಯಬಲ್ಲದು ಎನ್ನುವುದನ್ನು ಕೊತ್ತಲವಾಡಿ ಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ಇಬ್ಬರು ನಾಯಕರು. ಒಬ್ಬ ಊರಿನ ಗುಜರಿ ವ್ಯಾಪಾರಿ ಬಾಬಣ್ಣ. ಮತ್ತೋರ್ವ ಬಾಬಣ್ಣನ ಆಪ್ತ ಸಹಾಯಕ ಮೇಸ್ತ್ರಿ ಮೋನಣ್ಣ. ಬಾಬಣ್ಣ ಗುಜರಿ ಮಾರಾಟದಿಂದ ಬದುಕು ಕಟ್ಟಿಕೊಂಡವನು. ಆದರೆ ಇನ್ನಷ್ಟು ಆದಾಯಕ್ಕಾಗಿ ತಾನಿರುವ ಊರಲ್ಲೇ ಮರಳು ದಂಧೆ ಶುರು ಮಾಡುತ್ತಾನೆ. ಮೋನ‌ ಮೇಸ್ತ್ರಿ ಈತನಿಗೆ ಬಲಗೈ ಬಂಟನಾಗಿರುತ್ತಾನೆ. ಗುಜರಿಯಿಂದ ವ್ಯಾಪಾರ ಶುರುಮಾಡಿದ್ದ ಬಾಬಣ್ಣ ಶಾಸಕನೂ ಆಗುತ್ತಾನೆ. ಆದರೆ ಒಂದು ಹಂತದಲ್ಲಿ ಬಾಬಣ್ಣ ಮತ್ತು ಮೋನ ಮೇಸ್ತ್ರಿ ಮಧ್ಯೆ ವೈಮಸ್ಸು ಸೃಷ್ಟಿಯಾಗುತ್ತದೆ.‌ ಇದು ಹೇಗಾಯಿತು ಮತ್ತು ಮುಂದೆ ಏನಾಯಿತು ಎನ್ನುವುದೇ ಚಿತ್ರದ ಪ್ರಮುಖ ಅಂಶ.

ಪೃಥ್ವಿ ಅಂಬರ್ ಮೋನ ಮೇಸ್ತ್ರಿಯಾಗಿ ಹೊಡೆದಾಟ, ಹೋರಾಟ ಎಲ್ಲದರಲ್ಲೂ ಮುಂದು. ಸಂಭಾಷಣೆಯೂ ಚುರುಕು. ಪ್ರೇಮ ದೃಶ್ಯಗಳಲ್ಲಿ, ಹಾಡುಗಳಲ್ಲಿ ಮೆರುಗು. ಬಾಬಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ ಇಡೀ ಚಿತ್ರದ ತುಂಬ ತುಂಬಿಕೊಂಡಿದ್ದಾರೆ. ತಂತ್ರ, ಕುತಂತ್ರ, ಬುದ್ಧಿವಂತಿಕೆ ಮುಂತಾದ ಎಲ್ಲ ಭಾವಗಳಿಗೂ ರೂಪವಾಗಿದ್ದಾರೆ.

ಪೃಥ್ವಿಗೆ ಜೋಡಿಯಾಗಿ ನಟಿಸಿರುವ ಕಾವ್ಯ ಶೈವ ಎರಡು ಕಾಲಘಟ್ಟದ ಬದುಕನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಶಾಲಾ ಬಾಲಕಿ ಮತ್ತು ಯುವತಿಯಾಗಿ ಆಕರ್ಷಕ ನಟನೆ ನೀಡಿದ್ದಾರೆ.

ಶಾಸಕಿಯಾಗಿ ಮಾನಸಿ ಸುಧೀರ್ ಹೊಸ ರೂಪದಲ್ಲಿ ಕಾಣಿಸಿದ್ದಾರೆ. ನಟರಂಗ ರಾಜೇಶ್ ಎಸ್ ಪಿಯಾಗಿ ಮನಮುಟ್ಟುವ ಅಭಿನಯ ನೀಡಿದ್ದಾರೆ. ಅವಿನಾಶ್ ಅವರ ಪೊಲೀಸ್ ಪಾತ್ರಗಳ ಪಟ್ಟಿಗೆ ಮತ್ತೊಂದು ಪಾತ್ರ ಸೇರ್ಪಡೆಯಾಗಿದೆ.

ರಘು ನಿಡುವಳ್ಳಿ ಸಂಭಾಷಣೆ ಚಿತ್ರದ ಹೈಲೈಟ್. ವಿಕಾಸ್ ವಸಿಷ್ಠ ಸಂಗೀತದಲ್ಲಿ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಛಾಯಾಗ್ರಹಣ ಸೇರಿದಂ ಪ್ರತಿಯೊಂದು ತಾಂತ್ರಿಕ ಅಂಶಗಳು ಕೂಡ ಚಿತ್ರದ ತೂಕ ಹೆಚ್ಚು ಮಾಡಿದೆ. ಒಂದೊಳ್ಳೆಯ ಸಂದೇಶವಿರುವ ಮಾಸ್ ಚಿತ್ರ ಕೊತ್ತಲವಾಡಿ ಎನ್ನುವುದರಲ ಯಾವ ಸಂದೇಹವೂ ಇಲ್ಲ.

This Article Has 7 Comments
  1. Pingback: cheap androxal generic information

  2. Pingback: online order enclomiphene buy mastercard

  3. Pingback: buying xifaxan price in canada

  4. Pingback: get staxyn buy uk no prescription

  5. Pingback: discount dutasteride cheap mastercard

  6. Pingback: online order fildena cheap sale

  7. Pingback: kamagra bez předpisu kanady

Leave a Reply

Your email address will not be published. Required fields are marked *

Translate »
error: Content is protected !!