ಆಗಸ್ಟ್ 1ರಂದು ಬಿಡುಗಡೆ ಆಗಲಿರುವ ಕೊತ್ತಲವಾಡಿ ಚಿತ್ರ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂದು ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ .
ಕೊತ್ತಲವಾಡಿ ಎನ್ನುವ ಹಳ್ಳಿಯಲ್ಲಿ ನಡೆಯುವ ರಾಜಕೀಯದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಗ್ರಾಮದ ಹೆಸರು ರಾಜಕೀಯದ ಕಥೆ ಹೇಳಲು ಬೇಕಾದ ಕಾರಣ ಕೊತ್ತಲವಾಡಿ ಎನ್ನುವ ಹೆಸರನ್ನು ಆಯ್ಕೆ ಮಾಡಿಕೊಂಡೆವು. ಇದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಅವರು ಹೇಳಿದ್ದಾರೆ.
ಸೆಲೆಬ್ರಿಟಿ ಮನೆಯವರಾಗಿ ಈ ಚಿತ್ರ ಮಾಡಿರುವ ಕಾರಣ ಚಿತ್ರದ ಬಗ್ಗೆ ಜನರಿಗೆ ಹೆಚ್ಚಿನ ನಿರೀಕ್ಷೆ ಇದೆ. ಜನ ನಮ್ಮನ್ನು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ನಾಯಕ ನಟ ಪೃಥ್ವಿ ಅಂಬರ್ ಅವರು, ಪುಷ್ಪ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ದೊಡ್ಡ ಅದೃಷ್ಟ ಆಗಿದೆ. ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರ ಹೈಲೈಟ್ ಆಗಿರಲಿದೆ ಎಂದು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಶ್ರೀ ರಾಜ್ ಅವರು, ಪುಷ್ಪಾ ಅರುಣ್ ಕುಮಾರ್ ಅವರಂಥ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಅವರು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ, ಬಲ ರಾಜ್ವಾಡಿ, ಮಾನಸಿ ಸುಧೀರ್ ನಟಿಸಿದ್ದಾರೆ.
ಹೀರೋ ಇಂಟ್ರಡಕ್ಷನ್ ಹಾಗೂ ಹಿನ್ನೆಲೆ ಸಂಗೀತ ಅಭಿನಂದನ್ ಕಶ್ಯಪ್ ಅವರದ್ದು ಆಗಿದೆ. ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.





Be the first to comment