ನಿರ್ದೇಶನ: ಪರಮ್
ನಿರ್ಮಾಪಕರು: ಜ್ಯೋತಿ ದೇಶಪಾಂಡೆ
ತಾರಾಗಣ: ಧನಂಜಯ, ಮೋಕ್ಷ ಕುಶಾಲ್, ರಂಗಾಯಣ ರಘು, ರಮೇಶ್ ಇಂದಿರಾ ಇತರರು
ರೇಟಿಂಗ್ : 4/5
ಪ್ರಾಮಾಣಿಕವಾಗಿ ಕೆಲಸ ಮಾಡಿ ಒಬ್ಬ ವ್ಯಕ್ತಿ ಕೋಟಿ ಸಂಪಾದಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ನೀಡುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಕೋಟಿ.
ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಪಡುವ ಯುವಕ ತನಗೆ ಎದುರಾಗುವ ಆರ್ಥಿಕ ಸಂಕಷ್ಟಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದು ಕೋಟಿ ಚಿತ್ರದ ಕಥೆಯಾಗಿದೆ. ನಿರ್ದೇಶಕರು ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಚಿತ್ರವನ್ನು ಹೆಣೆಯುತ್ತಾ ಹೋಗಿದ್ದಾರೆ. ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚು ಕನೆಕ್ಟ್ ಆಗುವ ಕಾರಣ ಥಿಯೇಟರಿಗೆ ಬರುವ ಪ್ರೇಕ್ಷಕರ ಕಣ್ಣುಗಳು ಒದ್ದೆ ಆಗುತ್ತವೆ.
ಅಕ್ರಮ ಮಾರ್ಗದ ಮೂಲಕ ದುಡ್ಡು ದುಡಿಯಬಹುದು ಎಂದು ಚಿತ್ರ ಹೇಳಿದರೂ, ಚಿತ್ರದ ನಾಯಕ ಕೋಟಿ ಅಪ್ಪಿ ತಪ್ಪಿಯೂ ಅಕ್ರಮ ಮಾರ್ಗದಲ್ಲಿ ಹೆಜ್ಜೆ ಇಡುವುದಿಲ್ಲ. ಇದು ಚಿತ್ರದ ಹೈಲೈಟ್ ಆಗಿದೆ.
ನಟ ರಾಕ್ಷಸ ಡಾಲಿ ಧನಂಜಯ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಾರೆ. ನಾಯಕಿ ಮೋಕ್ಷ ಪ್ರೇಕ್ಷಕರನ್ನು ಸಖತ್ ಆಗಿ ರಂಜಿಸಿದ್ದಾರೆ. ತಾರಾ, ರಂಗಾಯಣ ರಘು, ತನುಜ ತಮ್ಮ ನಟನೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ವಾಸುಕಿ ವೈಭವ್ ಸಂಗೀತದ ಸಖಿಗೆ ಸಖಿಯೇ ಹಾಡು ಸೂಪರ್ ಆಗಿದೆ. ನೋಬಿಲ್ ಪೌಲ್ ಅವರು ಹಿನ್ನೆಲೆ ಸಂಗೀತದ ಮೂಲಕ ಮ್ಯಾಜಿಕ್ ಮಾಡಿದ್ದಾರೆ.
ಸದಭಿರುಚಿಯ ಚಿತ್ರವಾಗಿ ಕೋಟಿ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತದೆ.
___
Be the first to comment