ಇನ್ನೇನು ಬಿಡುಗಡೆಗೆ ತಾಯಾರಾಗಿದೆ ಅಂದಾಗ ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ. ಆದರೆ ಈ ಬಾರಿ ಯುಗಾದಿಗೆ ಭರ್ಜರಿ ಸುದ್ದಿಯೊಂದನ್ನು ಚಿತ್ರ ತಂಡ ನೀಡುತ್ತಿದೆ. ಕೊರಗಜ್ಹ ಚಿತ್ರವು ಈಗ 3ಡಿ ತಂತ್ರಜ್ಙಾನದೊಂದಿಗೆ ತಯಾರಾಗುತ್ತಿದೆ ಎನ್ನುವ ಸಂಭ್ರಮ.
ಸಾಮಾನ್ಯವಾಗಿ ಚಿತ್ರೀಕರಣದ ವೇಳೆಯಲ್ಲೇ 3ಡಿ ಶೂಟಿಂಗ್ ವಾಡಿಕೆ. 2ಡಿ ಯಲ್ಲಿ ಶೂಟಿಂಗ್ ಮಾಡಿ ಮತ್ತೆ 3ಡಿ ಗೆ ಕನ್ವರ್ಟ್ ಮಾಡುವುದು ಹೆಚ್ಚು ದುಬಾರಿ. ಆದರೆ ಚಿತ್ರದ ಗುಣಮಟ್ಟ ನೋಡಿ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು ಇದು ವರ್ಲ್ಡ್ ಕ್ಲಾಸ್ ರೀತಿಯ ಸಿನಿಮಾ. ಇದರ ಲೊಕೇಷನ್ ಮತ್ತು ಮೇಕಿಂಗ್ ನೋಡಿ ಇದು ಪ್ರಪಂಚದ ಯಾವುದೇ ಅದ್ಭುತ ಸಿನಿಮಾ ಕ್ಕಿಂತ ಕಡಿಮೆಯಿಲ್ಲ.
ಈ ರೀತಿಯ ಸಿನಿಮಾ ಅಪರೂಪ. ಇದನ್ನು ಮತ್ತೊಂದು ಲೆವೆಲ್ ಗೆ ಕೊಂಡೊಯ್ಯಲು ಆಧುನಿಕ 3D ವರ್ಧಿತ ದೃಶ್ಯ ಕಾವ್ಯವಾಗಿ ಮಾರ್ಪಡಿಸುವುದರಿಂದ, ಭಾಷಾ ಚೌಕಟ್ಟನ್ನು ಮೀರಿ ಇದು ಪ್ರಪಂಚದಾದ್ಯಂತ ಜನರಿಗೆ ಅತ್ಯುತ್ಕ್ರಷ್ಟ ಮನೋರಂಜನೆ ನೀಡಲು ಸಹಾಯವಾಗುತ್ತದೆ ಎಂಬ ಸಲಹೆ ನೀಡಿದ್ದರು.

ಹೆಚ್ಚು ವ್ಯವಹಾರ ಮಾಡುವುದರ ಜೊತೆಗೆ 3ಡಿ ಯಲ್ಲಿ ಚಿತ್ರ ವು ವೀಕ್ಷಕರನ್ನು ದೃಶ್ಯಕ್ಕೆ ಇನ್ನೂ ಆಳವಾಗಿ ಸೆಳೆಯುತ್ತದೆ ಅಲ್ಲದೆ ಹೆಚ್ಚು ಆಪ್ತ ಅನುಭವವನ್ನು ಸೃಷ್ಟಿಸುತ್ತದೆ ಮತ್ತು ಬಲವಾದ ಭಾವನಾತ್ಮಕ ಸಂಪರ್ಕವನ್ನು ಬೆಳೆಸುತ್ತದೆ ಎಂಬ ಕಾರಣಕ್ಕೆ 3ಡಿ ತಂತ್ರಜ್ಙಾನದಲ್ಲಿ ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ” “ಕೊರಗಜ್ಜ” ಚಿತ್ರವನ್ನು 2ಡಿ ಜೊತೆ 3ಡಿ ಚಿತ್ರವಾಗಿ ರೂಪಿಸಲು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ರವರು ಮನಸ್ಸು ಮಾಡಿರುತ್ತಾರೆ ಎಂಬ ವಿಷಯವನ್ನು ನಿರ್ದೇಶಕ ಸುಧೀರ್ ಅತ್ತಾವರ್ ಅತ್ಯಂತ ಸಂತಸದಿಂದ ತಿಳಿಸಿರುತ್ತಾರೆ.
ಸುಮಾರು 40 ಜನರ ತಂಡ ಈಗಾಗಲೇ ಇದಕ್ಕಾಗಿ ಕಾರ್ಯ ಪ್ರವ್ರತ್ತರಾಗಿರುತ್ತಾರೆ. “ಕೊರಗಜ್ಜ” ಚಿತ್ರಕ್ಕೆ ಅಂಡರ್ ವಾಟರ್ ಕ್ಲೈಮ್ಯಾಕ್ಸ್ ಟಚ್ ಡಾ ರಾಜ್ ನಂತರ ಕನ್ನಡದಲ್ಲಿ ಮೊತ್ತ ಮೊದಲದಾಗಿ ನಟಿ ಶ್ರತಿ ಅಂಡರ್ ವಾಟರ್ ನಲ್ಲಿ ಶೂಟಿಂಗ್.
ಕಳೆದ ಜನವರಿಯಲ್ಲಿ ಬಿಡುಗಡೆಗಾಗಿ ಸರ್ವ ಸನ್ನದ್ದವಾಗಿದ್ದ “ಕೊರಗಜ್ಜ” ಚಿತ್ರಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ರವರು ಮತ್ತೆ ಕ್ಲೈಮ್ಯಾಕ್ಸ ನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್ ಶೂಟಿಂಗ್ ನಲ್ಲಿ ಕೆಲ ಭಾಗಗಳನ್ನು ಪುನರ್ ಚಿತ್ರೀಕರಿಸಿದ್ದಾರೆ.

ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ “ವಿಸ್ಮಯ” ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ ಸೆಟ್ ನಿರ್ಮಿಸಿ ನಟಿ ಶ್ರತಿ ಅಭಿನಯಿಸಿದ ಭಾಗಗಳನ್ನು ನೀರಿನ ಅಡಿಯಲ್ಲಿ ಖ್ಯಾತ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ ನಾಲ್ಕು ಕ್ಯಾಮರಗಳಲ್ಲಿ ಚಿತ್ರೀಕರಿಸಿಕೊಂಡರು.
ಕನ್ನಡದ ನಟಿಯೊಬ್ಬಳು ಅಪಾಯಕಾರಿ ಅಂಡರ್ ವಾಟರ್ ನಲ್ಲಿ ಅಭಿನಯಿಸುತ್ತಿರುವುದು ಬಹುಷಃ ಇದೇ ಮೊದಲು. ಇದಕ್ಕಾಗಿ ಶ್ರತಿ ಸುಮಾರು 15ದಿನಗಳ ತಯಾರಿಯಲ್ಲಿದ್ದರು. ಸೆಟ್ ನಲ್ಲಿ ಸ್ಕ್ಯೂಬಾ ಡೈವರ್ಸ್ ಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಆಂಬ್ಯಲೆನ್ಸ್ ಮತ್ತು ವೈದ್ಯರ ತಂಡ ಕೂಡಾ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು.
ಹಾರ್ನೆಸ್ ನಲ್ಲಿ ಸುಮಾರು 30ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈ ನವಿರೇಳಿಸುವ ಅಪಾಯಕಾರಿ ಸ್ಟಂಟ್ ನಲ್ಲಿ ನಟಿ ಶ್ರತಿ ಸ್ವತಃ ಅಭಿನಯಿಸಿ ಎಲ್ಲರನ್ನು ದಂಗು ಬಡಿಸಿದರು. ಇದಲ್ಲದೆ ನೀರಿನೊಳಗೆ 22 ಸೆಕೆಂಡ್ ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ಶ್ರತಿ ಅಭಿನಯಿಸಿ ಎಲ್ಲರನ್ನು ದಂಗುಬಡಿಸಿದರು.
ಇದೆಲ್ಲವು ಚಿತ್ರದ ಬಜೆಟನ್ನು ಇನ್ನೂ ಎತ್ತರಕ್ಕೆ … ಸುಮಾರು 12 ಕೋಟಿ ರುಪಾಯಿಯಷ್ಟು ಏರಿಸಿದೆ ಎಂದು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿರುತ್ತರೆ.





Be the first to comment