ಕೊರಗಜ್ಜ

‘ಕೊರಗಜ್ಜ’ ಚಿತ್ರದ ಆಡಿಯೋ ಹಕ್ಕುಗಳಿಗೆ ಭಾರಿ ಬೇಡಿಕೆ!

“ಕೊರಗಜ್ಜ” ಸಿನಿಮಾದ ಸಂಗೀತ ಕೇವಲ ರಾಗ ಸಂಯೋಜನೆ ಮಾತ್ರವಲ್ಲ, ಇದು ಮತ್ತೊಂದು ರೀತಿಯ ಸಂಸ್ಕ್ರತಿಯ ಅನಾವರಣಗೊಳಿಸುವಂತೆ ಮಾಡಿದೆ ಎಂದು ಚಿತ್ರಕ್ಕೆ ಸಂಗೀತ ನೀಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕೊಚ್ಚಿ ಹೇಳಿದರು. ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಜೊತೆ ಪತ್ರಕರ್ತರ ಜೊತೆಗಿನ ಜಂಟಿ ಸಂವಾದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕೊಚ್ಚಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ಕೇವಲ ಮಾಮೂಲಿ ತಂದೆ-ಮಗಳ ಕಥೆಯಂತಲ್ಲ, ನಿರ್ದೇಶಕರು ಸಾಕಷ್ಟು ರೀ ಸರ್ಚ್ ಮಾಡಿ ಚಿತ್ರೀಕರಿಸಿದ್ದುದರಿಂದ ಮತ್ತು ಹೊಸ ಸಂಪ್ರದಾಯ ಮತ್ತು ವಿಶೇಷ ನಂಬಿಕೆಗಳ ಆಧಾರದ ಮೇಲೆ ನಿಂತಿರುವ ಚಿತ್ರವಾಗಿದ್ದುದರಿಂದ ಇದರ ಬಗ್ಗೆ ಅಭ್ಯಾಸ ಮಾಡಿ ಸಂಗೀತ ಸಂಯೋಜಿಸಲು ಹೆಚ್ಚು ಸಮಯ ಬೇಕಾಗಿತ್ತು. ನಾನು ಹೊಸ ಸಂಪ್ರದಾಯವನ್ನು ಅಭ್ಯಾಸ ಮಾಡಿ ರಚಿಸಿದ ಟ್ಯೂನ್​ಗಳನ್ನು ಚಿತ್ರದ ನಿರ್ದೇಶಕರಿಗೆ ಮೆಚ್ಚುಗೆ ಆದದ್ದು ನನ್ನ ನ್ನು ಖುಷಿ ಗೊಳಿಸಿದೆ ಎಂದು ಗೋಪಿ ಸುಂದರ್ ಕೊಚ್ಚಿ ಹೇಳಿದರು.

ನನ್ನ ಮೆಚ್ಚುಗೆ ಎನ್ನುವುದಕ್ಕಿಂತ ಮುಖ್ಯ, ಗೋಪಿಯವರು ಅಂತಹ ಅದ್ಭುತ ಮಟ್ಟದಲ್ಲಿ ಕಂಪೋಸಿಂಗ್ ಮಾಡಿರುತ್ತಾರೆ. “ಕೊರಗಜ್ಜ” ಸಿನಿಮಾದ ಸಬ್ಜೆಕ್ಟ್ ನನಗೆ ಹೊಸಾರೀತಿಯ “ಜ಼ೋನರ್ ” ನ್ನು ಆವಿಷ್ಕಾರ ಮಾಡಲು ಸಹಾಯ ಮಾಡಿದೆ. ಸಂಗೀತ ಕ್ಷೇತ್ರದಲ್ಲಿ ಹೊಸಾ ಬಗೆಯ ಅನ್ವೇಷಣೆಯೋದಿಗೆ ಹಾಡುಗಳ ಕಂಪೋಸಿಂಗ್ ನಡೆಸಲು ಇದು ಹೆಚ್ಚು ಸಹಕಾರಿಯಾಗಿದೆ ಎಂದು ನಿರ್ದೇಶಕರು ಸಂಗೀತದ ಬಗ್ಗೆ ಖುಷಿ ವ್ಯಕ್ತಪಡಿಸಿದರು.

ಇದು ರೆಗ್ಯುಲರ್ ಸಿನಿಮಾದ ಮಾದರಿಯನ್ನು ಮೀರಿ ಯಾರೂ ಊಹಿಸದ ರೀತಿಯ ಬಗೆ ಬಗೆಯ ಸೂಕ್ಷ್ಮ ಪದರಗಳನ್ನು ಹೊಂದಿರುವ ಚಿತ್ರ ಹಾಗೂ ಅದಕ್ಕೆ ಒದಗಿ ಬರುತ್ತಿರುವ ಸಂಗೀತ-ಎಂದೂ, ಇಂತಹ ಚಿತ್ರಕ್ಕೆ ಸಂಗೀತ ನೀಡುವುದು ಅತ್ಯಂತ ಚಾಲೆಂಜಿಂಗ್ ಕೆಲಸ ಮತ್ತು ನನ್ನ ಸೌಭಾಗ್ಯ. ಗೋಪಿಯವರು ತಮ್ಮ “ಪುಳಿ ಮುರುಗನ್” ಚಿತ್ರದ ಹಿನ್ನೆಲೆ ಸಂಗೀತ ಆಸ್ಕರ್ ಗೆ ಆಯ್ಕೆ ಯಾದರೂ, ಕೊನೆಯ ಸುತ್ತಿನಲ್ಲಿ ಆಸ್ಕರ್ ಪಡೆಯಲು ವಿಫಲಗೊಂಡಿತ್ತು. ಆದರೆ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಉತ್ಕ್ರಷ್ಟ ಮಟ್ಟದ ಸಂಗೀತ ನೀಡಿದ್ದಾರೆ ಎಂದು ನಿರ್ದೇಶಕ ತಿಳಿಸಿದರು.

ತ್ರಿವಿಕ್ರಮ ಸಾಪಲ್ಯರವರು ಸಕ್ಸಸ್ ಫಿಲ್ಮ್ಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್​ನಡಿ ನಿರ್ಮಿಸಿರುವ ಕೊರಗಜ್ಜ ಚಿತ್ರದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ರೆಕಾರ್ಡಿಂಗ್ ವೇಳೆ – ಸಿನಿಮಾದ ಸಂಗೀತದ ಬಗ್ಗೆ, ಗೋಪಿ ಸುಂದರ್​ನ ಕಂಪೋಸಿಶನ್​ನ ರಾಗ- ಧಾಟಿ ಬಗ್ಗೆ ದೇಶದ ಅಗ್ರಗಣ್ಯ ಗಾಯಕರುಗಳಾದ ಶ್ರೇಯ ಘೋಶಾಲ್, ಶಂಕರ್ ಮಹದೇವನ್, ಸುನಿಧಿ ಚೌಹಾನ್, ಜಾವೇದ್ ಆಲಿ, ಶರೋನ್ ಪ್ರಭಾಕರ್ ಅರ್ಮನ್ ಮಲಿಕ್, ಸ್ವರೂಪ್ ಖಾನ್ ಮೊದಲಾದವರು ಮುಕ್ತಕಂಠದಿಂದ ಶ್ಲಾಘಿಸಿರುವ ವಿಚಾರವನ್ನು ಈ ಸಮಯದಲ್ಲಿ ಸುಧೀರ್ ವಿವರಿಸಿದರು.

ಶಂಕರ್ ಮಹದೇವನ್ ಹಾಡಿರುವ ಹಾಡಿನಲ್ಲಿ ರಾಮಾಯಣದ “ರಾವಣೇಶ್ವರ” ಬರೆದಿರುವ ಶಿವತಾಂಡವದ ತುಣುಕುಗಳನ್ನು ಸೇರಿಸಿರುವ ವಿಚಾರವನ್ನೂ ವಿವರಿಸಿದರು.ಕರಾವಳಿಯ ಅತ್ಯಂತ ಉಗ್ರ “ಗುಳಿಗ” ದೈವದ ಬಗ್ಗೆ ಜಾವೇದ್ ಆಲಿಯವರು ಹಾಡಿ, ರೆಕಾರ್ಡಿಂಗ್ ನಂತರ ತಮಗಾದ ರೋಮಾಂಚನದ ಬಗ್ಗೆಯೂ ವಿಚಾರ ಹಂಚಿಕೊಂಡರು.

ಎಲ್ಲಾ ಹಾಡುಗಳನ್ನು ಮೂರ್ನಾಲ್ಕು ಭಾಷೆಗಳಲ್ಲಿ ಸುಧೀರ್ ರಚಿಸಿರುವುದಲ್ಲದೆ, ವಿಭಿನ್ನ ಧಾಟಿಯಲ್ಲಿ ಹಾಡಿದ್ದಾರೆ. ಹೊಸ ಹೊಸ ಉಧ್ಗಾರಗಳ ಜೊತೆ ಆಶ್ಚರ್ಯ ಪಡುವ ರೀತಿಯ ಹೊಸ ಬಗೆಯ ಸೌಂಡಿಂಗ್ ಮತ್ತು ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ. ಇದು ಅತ್ಯಂತ ವಿಶಿಷ್ಟ ರೀತಿಯ ಹಾಡುಗಳನ್ನು ಸ್ರಷ್ಟಿಸಲು ಪೂರಕವಾಗಿದೆ ಎಂದು ಎಂದು ಗೋಪಿ ಹೇಳಿದರು.

ಚಿತ್ರದ “ಆಡಿಯೋ ರೈಟ್” ಖರೀದಿಸಲು ದೇಶದ ಮುಂಚೂಣಿಯ ಆಡಿಯೋ ಕಂಪೆನಿಗಳಿಂದ ಭಾರೀ ಪೈಪೋಟಿ ನಡೆಸುತ್ತಿರುವ ಬಗ್ಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು ಮಾಹಿತಿ ಹಂಚಿಕೊಂಡರು. ಮುಂಬೈ ಸೇರಿದಂದೆ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಖ್ಯಾತ ಆಡಿಯೋ ಕಂಪೆನಿಗಳು ತಮ್ಮನ್ನು ಸಂಪರ್ಕಿಸಿ, ನಾನು ಊಹಿಸದ ಮಟ್ಟದ ಪ್ರೈಸ್ ನೀಡಲು ಮುಂದೆ ಬರುತ್ತಿದೆ ಎಂದು ಗೋಪಿ ಹೆಮ್ಮೆಯಿಂದ ಹೇಳಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!