ಅಕ್ಟೋಬರ್ 31 ರಂದು ಬಿಡುಗಡೆ ಆಗುತ್ತಿರುವ ಕೋಣ ಚಿತ್ರದಲ್ಲಿ ಮೂಢನಂಬಿಕೆಯ ವಿಷಯವನ್ನು ಕನೆಕ್ಟ್ ಮಾಡಲಾಗಿದೆ ಎಂದು ನಾಯಕ ನಟ ಕೋಮಲ್ ಕುಮಾರ್ ತಿಳಿಸಿದ್ದಾರೆ.
ಚಿತ್ರ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಕೋಣವನ್ನು ಬಲಿಕೊಡುವ ಪದ್ಧತಿ ಇರುವ ಊರಿಗೆ ಹೋದಾಗ ಅದರಿಂದ ಹೇಗೆ ಹೊರಬರುತ್ತೇನೆ ಎನ್ನುವ ಕಥೆ ಚಿತ್ರದಲ್ಲಿದೆ. ಕೋಣ ಬಲಿ ಕೊಡದೆ ಇದ್ದರೆ ಏನಾಗುತ್ತದೆ ಎನ್ನುವುದು ಚಿತ್ರದ ಕಥೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರ ನಾಲ್ಕು ತಿಂಗಳ ಹಿಂದೆ ಬರಬೇಕಿತ್ತು. ಚಿತ್ರವನ್ನು ಹಳ್ಳಿಯಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಕೋಣ ಒಂದು ಮುಖ್ಯ ಪಾತ್ರವಾಗಿದೆ. ಕೋಣವನ್ನು ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವ ಊರಿನ ನಂಬಿಕೆ ಉಲ್ಟಾ ಆದಾಗ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು ಎಂದು ಅವರು ಹೇಳಿದ್ದಾರೆ.
ತನಿಶಾ ಅವರ ಜೊತೆಗೆ ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಫ್ಯಾಂಟಸಿ ಹಾರರ್ ಚಿತ್ರವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಶಶಾಂಕ್ ಶೇಷಗಿರಿ ಅವರು ಸಂಗೀತ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲ್ಲ ಭಾಷೆಗೂ ಕನೆಕ್ಟ್ ಆಗುವ ಕಥೆ ಈ ಚಿತ್ರದಲ್ಲಿದೆ. ಮುಂದಿನ ದಿನಗಳಲ್ಲಿ ಇತರ ಭಾಷೆಗಳಿಗೆ ಡಬ್ ಮಾಡುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಡಾರ್ಕ್ ಕಾಮಿಡಿ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಕೀರ್ತಿರಾಜ್, ರಿತ್ವಿ ಜಗದೀಶ್, ವಿಜಯ್ ಚೆಂಡೂರ್, ಹುಲಿ ಕಾರ್ತಿಕ್, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ ಇತರರು ನಟಿಸಿದ್ದಾರೆ.
ಚಿತ್ರವನ್ನು ಹರಿಕೃಷ್ಣ ಅವರು ನಿರ್ದೇಶಿಸಿದ್ದಾರೆ. ವೀನಸ್ ನಾಗರಾಜ ಮೂರ್ತಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ವಿನೋದ್ ಕುಮಾರ್ ಅವರ ಸಾಹಸ ನಿರ್ದೇಶನ, ಮುರುಗ ಮಾಸ್ಟರ್ ಅವರ ನೃತ್ಯ ನಿರ್ದೇಶನ, ಶಶಿಕುಮಾರ್ ಅವರ ಸಂಭಾಷಣೆ ಚಿತ್ರಕ್ಕಿದೆ.





Be the first to comment