ಸ್ಯಾಂಡಲ್‌ವುಡ್‌ನ ಹಾಸ್ಯನಟ ಕೋಮಲ್ ಮೊದಲ ಬಾರಿಗೆ ಕಾಲಿವುಡ್‌ಗೆ ಹೆಜ್ಜೆ ಹಾಕಿದ್ದಾರೆ.
ಕೋಮಲ್ ತಮಿಳು ಸಿನಿಮಾದಲ್ಲಿ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆಗೆ ನಟಿಸುತ್ತಿದ್ದಾರೆ. ಕೋಮಲ್ ಈ ಚಿತ್ರಕ್ಕಾಗಿ ಕಪ್ಪು ಲುಂಗಿ, ಹುಲಿ ಕಲರ್ ಶರ್ಟ್ ಧರಿಸಿ, ತಮಿಳು ಚಿತ್ರಕ್ಕೆ ಬೇಕಾಗಿರೋ ಹಾಗೆ ರಫ್ ಆಗಿಯೇ ರೆಡಿಯಾಗಿದ್ದಾರೆ. ಕೋಮಲ್, ಪ್ರಭು ಜೊತೆಗಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ಕೋಮಲ್ ಇದಕ್ಕೂ ಮುನ್ನ ಒಂದು ತಮಿಳು ಚಿತ್ರ ಮಾಡಿದ್ದರು. ಆ ಸಂದರ್ಭದಲ್ಲಿ ಸ್ವಲ್ಪ ಜಾಸ್ತಿ ದಪ್ಪ ಇದ್ದರು. ಆವಾಗ ತಾನು ನೋಡುವುದಕ್ಕೆ ತಮಿಳಿನ ವಿಜಯಕಾಂತ್ ತರ ಕಾಣ್ತಾ ಇದ್ದೆ. ಆ ಸಿನಿಮಾ ನಿಂತು ಹೋಗಿತ್ತು ಎಂದು ಕಳೆದ ವರ್ಷ ಕೋಮಲ್ ಹೇಳಿದ್ದರು.
ಕೋಮಲ್ ಕುಮಾರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕನ್ನಡದ ‘ಯಲಾ ಕುನ್ನಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಸಡಗರ’ ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ. ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್ , ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
Be the first to comment